ನವದೆಹಲಿ: ಕರ್ನಾಟಕದ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ಹಂಸರಾಜ್ ಭಾರದ್ವಾಜ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ರಾತ್ರಿ ನಿಧನರಾದರು.
2009ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಣವ್ ಮುಖರ್ಜಿ ಅವರು ಟ್ವೀಟ್ ನಲ್ಲಿ ಬರೆದು “ಅನಾರೋಗ್ಯದಿಂದ ಬಳಲುತ್ತಿದ್ದ ಭಾರದ್ವಾಜ್ ಅವರು ನಿಧನರಾಗಿದ್ದು, ಅವರು ಕೇಂದ್ರ ಕಾನೂನು ಸಚಿವರಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರರ್ಣಾಹ ಎಂದು ಸಂತಾಪ ಸೂಚಿಸಿದ್ದು, ಅವರ ಕುಟುಂಬ ವರ್ಗಕ್ಕೆ ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ.
ಭಾರದ್ವಾಜ್ ಅವರ ಅಂತ್ಯಸಂಸ್ಕಾರವು ಸೋಮವಾರ ದಿಲ್ಲಿಯ ನಿಹಮ್ ಬೋದ್ ಘಾಟ್ ನಲ್ಲಿ ನೆರವೇರಲಿದೆ.