ಬೆಂಗಳೂರು: ವ್ಯಾಪಕವಾಗಿ ಕೊರೊನಾ ವೈರಸ್ ಹರುಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ಮಾರ್ಚ್ 31ರವರೆಗೆ ಲಾಕ್ಡೌನ್ ಮಾಡಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಂಗಳವಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಬಡವರ ಬಂಧು ಯೋಜನೆಯಡಿ ಪಡೆದಿರುವ ಸಾಲಮನ್ನಾ, ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ 1500 ರೂಪಾಯಿ ನೀಡುವುದು, 2 ತಿಂಗಳ ಪಡಿತರವನ್ನು ಮುಂಚಿತವಾಗಿ ವಿತರಣೆ ಮಾಡುವುದು ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮುಂಗಡ ಬಿಡುಗಡೆ ಮಾಡುವುದನ್ನು ಘೋಷಣೆ ಮಾಡಿದರು.