341 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಬ್ಯಾಂಕ್​

ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್​ಗಳಲ್ಲೊಂದಾದ ಕರ್ನಾಟಕ ಬ್ಯಾಂಕ್​ನ ದೇಶದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಅರ್ಜಿ ಕರೆಯಲಾಗಿದೆ.ಪ್ರತಿಷ್ಠಿತ ಕರ್ನಾಟಕಬ್ಯಾಂಕ್‌ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಗಸ್ಟ್​ 26 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.
ಒಟ್ಟು 341 ಹುದ್ದೆಗಳು ಖಾಲಿ ಇದ್ದು, ಆಗಸ್ಟ್​ 12ರಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ. ಆ.26 ರವರೆಗೆ ಆನ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಮ್ಯಾನೇಜರ್, ಪ್ರೊಬೇಷನರಿ ಆಫೀಸರ್, ಸ್ಪೆಷಲಿಸ್ಟ್ ಆಫೀಸರ್, ಕ್ಲರ್ಕ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ. ಬಿ.ಟೆಕ್, ಎಂ.ಟೆಕ್, ಎಂಸಿಎ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಆಗಸ್ಟ್​ 1ಕ್ಕೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿ 28 ವರ್ಷ. ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರಿಗೆ ಹೆಚ್ಚುವರಿ 5 ವರ್ಷ ಅಂದರೆ 33 ವರ್ಷ ಗರಿಷ್ಟ ವಯೋಮಿತಿ ನಿಗದಿ.

ಆಯ್ಕೆ ಪ್ರಕ್ರಿಯೆ: ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸೆಪ್ಟಂಬರ್​ ತಿಂಗಳಿನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ದಿನಾಂಕ ನಿಗದಿಯಾಗಿಲ್ಲ.

ಅರ್ಜಿ ಶುಲ್ಕ: ಆನ್​ಲೈನ್​ ಮೂಲಕ ಅರ್ಜಿ ಶುಲ್ಕ ಸಲ್ಲಿಸಬೇಕಾಗಿದ್ದು, ಸಾಮಾನ್ಯ ವರ್ಗ 800 ರೂ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 700 ರೂಪಾಯಿ ಶುಲ್ಕ ಪಾವತಿಸಬೇಕು.
ವೇತನ: ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನ ನಿಗದಿ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈ, ಚೆನ್ನೈ, ದೆಹಲಿ ಮತ್ತು ದೇಶದ ಇತರ ಪ್ರಮುಖ ನಗರಗಳಲ್ಲಿ ಪರೀಕ್ಷೆ.ಕಾರ್ಯ ನಿರ್ವಹಿಸುವ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳು ಸೂಚಿಸಿದ ಶಾಖೆಯಲ್ಲಿ ಅಂದರೆ ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಬೇಕಿದೆ.

ಪದವಿ ಆಗಿದೆಯೇ? ಬೆಂಗಳೂರಿನಲ್ಲಿದೆ ಉದ್ಯೋಗವಕಾಶ: ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ (ಐಎಸ್​ಇಸಿ) ಕಾರ್ಯ ನಿರ್ವಹಿಸಲು ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು (ಎನ್​​ಎಫ್‌ಎಚ್​ಎಸ್)​​ ಯೋಜನೆ ನಿರ್ವಹಣೆ ಉದ್ದೇಶಕ್ಕೆ ಈ ಹುದ್ದೆಗಳ ಭರ್ತಿ ನಡೆಸುತ್ತಿದೆ. ಹುದ್ದೆಯ ವೇತನ ಸೇರಿ ಸಂಪೂರ್ಣ ವಿವರಗಳಿಗಾಗಿ
ಮತ್ತು ವರ್ಗವಾರು ವಯೋಮಿತಿ ಸಡಿಲಿಕೆಗಳು, ಪರೀಕ್ಷೆಯ ಪಠ್ಯಕ್ರಮ, ಪರೀಕ್ಷಾ ಮಾದರಿ ಸೇರಿದಂತೆ ಇತರೆ ಹೆಚ್ಚಿನ ಮಾಹಿತಗಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.karnatakabank.com ಗೆ ಭೇಟಿ ನೀಡಿ.