udupixpress
Home Trending ಕಾರ್ಕಳ ಬಿಜೆಪಿ ಯುವ ಮೋರ್ಚಾದಿಂದ ನೀಲಾವರ ಗೋಶಾಲೆಗೆ ಹಸಿಹುಲ್ಲು ಹಸ್ತಾಂತರ

ಕಾರ್ಕಳ ಬಿಜೆಪಿ ಯುವ ಮೋರ್ಚಾದಿಂದ ನೀಲಾವರ ಗೋಶಾಲೆಗೆ ಹಸಿಹುಲ್ಲು ಹಸ್ತಾಂತರ

ಕಾರ್ಕಳ: ಕಾರ್ಕಳ ಬಿಜೆಪಿ ಯುವಮೋರ್ಚಾದ ವತಿಯಿಂದ ಗೋಗ್ರಾಸ ಸಂಕಲ್ಪದ ಬೃಹತ್ ಅಭಿಯಾನದಡಿ ನೀಲಾವರ ಗೋಶಾಲೆಗೆ ಭಾನುವಾರ ಹಸಿಹುಲ್ಲು ಹಸ್ತಾಂತರ ಮಾಡಲಾಯಿತು.

ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಯುವಮೋರ್ಚಾದ ಕಾರ್ಯಕರ್ತರು ಹಸಿಹಲ್ಲು ಕೊಯ್ದು ಸಂಗ್ರಹ ಮಾಡಿದರು. ಬಳಿಕ ಅದನ್ನು ಒಂದು ಟೆಂಪೋಗೆ ಲೋಡ್ ಮಾಡಿ ನೀಲಾವರದ ಗೋಶಾಲೆಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಕಾರ್ಕಳ ಯುವ ಮೋರ್ಚಾದ ಅಧ್ಯಕ್ಷ ಮುಟ್ಲುಪಾಡಿ ಸುಹಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಭರತ್ ಕುಮಾರ್ ಜೈನ್ ಮತ್ತು ಯೋಗೀಶ್ ಸಾಲಿಯಾನ್ ಸೇರಿದಂತೆ ಯುವಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು.