ವಿಜೇತ ಪೈ ಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ

ಕಾರ್ಕಳ: ಗುಜರಾತಿನ ವಡೋದರದಲ್ಲಿ ನಡೆದ ಮೂರನೆ ರಾಷ್ಟ್ರೀಯ ಮಟ್ಟದ  ಮಾಸ್ಟರ್ಸ್  ನ್ಯಾಶನಲ್ ಗೇಮ್ಸ್ ನಲ್ಲಿ  ಈಜು ಸ್ಪರ್ಧೆಯಲ್ಲಿ 50 ಮೀಟರ್ ಹಾಗು 100 ಮೀಟರ್ ವಿಭಾಗದಲ್ಲಿ  ಎರಡು ಚಿನ್ನದ ಪದಕಗಳನ್ನು  ಹಾಗು ಹಿಮ್ಮಖ ಈಜಿನಲ್ಲಿ  50 ಮೀಟರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ವಿಜೇತ ಪೈ ಈಜಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎರಡು ಬಂಗಾರದ ಪದಕ ಹಾಗೂ ಬೆಳ್ಳಿ ಪದಕ ಪಡೆದು ಆಸ್ಟ್ರೇಲಿಯಾ ದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆಯಾಗಿದ್ದಾರೆ
ವಿಜೇತ ಪೈ  ಮರ್ಣೆ ಗ್ರಾ.ಪಂ ಸದಸ್ಯ ರಾಗಿದ್ದು , ಅಜೆಕಾರು ಸಹಕಾರಿ  ವ್ಯವಸಾಯಿಕ ಸೇವಾ ಸಂಘದಲ್ಲಿ ಸದಸ್ಯರಾಗಿದ್ದು ಸಾಮಾಜಿಕ ರಂಗದಲ್ಲಿ  ತೊಡಗಿಸಿ ಕೊಂಡಿದ್ದಾರೆ.