ಕಾರ್ಕಳ: ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಭುವನೇಂದ್ರ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಸತೀಶ್ ಶೆಣೈ ಅವರ ಪುತ್ರಿ ಕು. ಶ್ವೇತಾ ಶೆಣೈ ಅವರಿಗೆ ಅರಸ್ ಕಟ್ಟೆ ಪ್ರಭು ಕುಟುಂಬಸ್ಥರಿಂದ ಕಾರ್ಕಳದ ಕಾಶೀಮಠದಲ್ಲಿ ಇತ್ತೀಚೆಗೆ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ್ ಪೈ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ವಿಜಯ ಶೆಟ್ಟಿ, ಸುರೇಂದ್ರ ಭಟ್, ರವೀಂದ್ರ ಪ್ರಭು, ಸುರೇಶ್ ಪ್ರಭು, ಹಿರಿಯ ಕಲಾವಿದ ಮೋಹನ್‌ದಾಸ್ ಪ್ರಭು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ರಿ ವಿಜೇತ ದಿನೇಶ್ ಪ್ರಭು ಕಲ್ಲೊಟ್ಟೆ, ಕಾರ್ಕಳದ ಅಂಚೆ ಇಲಾಖೆಯ ಉಪಅಧೀಕ್ಷಕ ಧನಂಜಯ್ ಆಚಾರ್ ಶುಭ ಹಾರೈಸಿದರು. ಪ್ರಕಾಶ್ ಪ್ರಭು ಸ್ವಾಗತಿಸಿದರು, ಶೋಭಾ ಬಾಸ್ಕರ್ ಕಾರ್ಯಕ್ರಮ ನಿರೂಪಿಸಿದರು, ನಾಗೇಶ್ ಪ್ರಭು ವಂದಿಸಿದರು.