ಕಾರ್ಕಳದಲ್ಲಿ ಈಶ್ವರೀಯ ವಿದ್ಯಾಲಯದ ಸೇವಾಕೇಂದ್ರದಿಂದ ಶಿವರಾತ್ರಿ ಉತ್ಸವ

ಕಾರ್ಕಳ : ನಿರ್ಮಲ ಪ್ರೇಮವನ್ನು ಹಂಚುವುದರ ಮೂಲಕ ವಿಶ್ವಮಾನವರಾಗಲು ಸಾಧ್ಯ. ಜಗತ್ತಿನಲ್ಲಿ ಋಣಾತ್ಮಕ ಶಕ್ತಿ ಹೆಚ್ಚುತ್ತಾ ಇರುವಂತೆ ನಾವು ಆತ್ಮಶಕ್ತಿಯನ್ನು ಜಾಗೃತಿ ಮಾಡಿಕೊಂಡು ಮುನ್ನಡೆದರೆ ಮಾತ್ರ ವಿಶ್ವಮಾನವತ್ವ ದೊರೆಯುತ್ತದೆ. ಆತ್ಮಶಕ್ತಿ ಜಾಗೃತಿಗೆ ರಾಜಯೋಗ ಶಿಕ್ಷಣ ಪರಿಹಾರವಾಗಬಲ್ಲದು ಎಂದು ಶಿಕ್ಷಕ ಮತ್ತು ಜೇಸೀಸ್ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಕೆ. ಅವರು ಅಭಿಪ್ರಾಯಪಟ್ಟರು.

 ಅವರು ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ಕಾರ್ಕಳ ಸೇವಾಕೇಂದ್ರದ ವತಿಯಿಂದ ರವಿವಾರ ಇಲ್ಲಿನ ಆನೆಕೆರೆ ಸದ್ಯೋಜಾತ ಪಾರ್ಕ್ ನಲ್ಲಿ  ಆಚರಿಸಿದ ಶಿವರಾತ್ರಿ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದ ಉದ್ಘಾಟನೆಯನ್ನು ಉದ್ಯಮಿ ಎಂ. ಗಣಪತಿ ಪೈ ನೆರವೇರಿಸಿ, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ದೇಶ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಫಲ ರಹಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅಸಂಖ್ಯಾತ ಕಾರ್ಯಕರ್ತರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮತ್ತು ಕಸದಿಂದ ರಸ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಾದವರಿಗೆ ಪುರಸಭಾ ಸದಸ್ಯೆ ಸುಮಾಕೇಶವ್ ಬಹುಮಾನ ವಿತರಿಸಿದರು. ತೀರ್ಪುಗಾರರ ಪರವಾಗಿ ಸದಾಶಿವ ಕಾಮತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಕಳ ಶಾಖೆಯ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮೀ ಸಭಾಧ್ಯಕ್ಷತೆ ವಹಿಸಿ ಶಿವರಾತ್ರಿ ಹಬ್ಬದ ರಹಸ್ಯದ ಬಗ್ಗೆ  ತಿಳಿಸಿದರು. ಬಿ.ಕೆ. ಶಶಿಕಲಾ ಹಾಗೂ ಬಿ.ಕೆ. ಇಂದಿರಾ ಸ್ವಾಗತಿಸಿದರು. ಬಿ.ಕೆ. ಗಾಯತ್ರಿ, ಸಂಸ್ಥೆಯ ಪರಿಚಯ ನೀಡಿ ರಾಜಯೋಗ ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಅಕ್ಷತಾ  ಮತ್ತು ಕುಮಾರಿ ಸಹನಾ ಜೈನ್‌ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು, ಬಿ.ಕೆ. ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಕಳದಲ್ಲಿ ಈಶ್ವರೀಯ ವಿದ್ಯಾಲಯದ ಸೇವಾಕೇಂದ್ರದಿಂದ ಶಿವರಾತ್ರಿ ಉತ್ಸವ

ಕಾರ್ಕಳ : ನಿರ್ಮಲ ಪ್ರೇಮವನ್ನು ಹಂಚುವುದರ ಮೂಲಕ ವಿಶ್ವಮಾನವರಾಗಲು ಸಾಧ್ಯ. ಜಗತ್ತಿನಲ್ಲಿ ಋಣಾತ್ಮಕ ಶಕ್ತಿ ಹೆಚ್ಚುತ್ತಾ ಇರುವಂತೆ ನಾವು ಆತ್ಮಶಕ್ತಿಯನ್ನು ಜಾಗೃತಿ ಮಾಡಿಕೊಂಡು ಮುನ್ನಡೆದರೆ ಮಾತ್ರ ವಿಶ್ವಮಾನವತ್ವ ದೊರೆಯುತ್ತದೆ. ಆತ್ಮಶಕ್ತಿ ಜಾಗೃತಿಗೆ ರಾಜಯೋಗ ಶಿಕ್ಷಣ ಪರಿಹಾರವಾಗಬಲ್ಲದು ಎಂದು ಶಿಕ್ಷಕ ಮತ್ತು ಜೇಸೀಸ್ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಕೆ. ಅವರು ಅಭಿಪ್ರಾಯಪಟ್ಟರು.

 ಅವರು ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ಕಾರ್ಕಳ ಸೇವಾಕೇಂದ್ರದ ವತಿಯಿಂದ ರವಿವಾರ ಆಚರಿಸಿದ ಶಿವರಾತ್ರಿ ಉತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು.

ಸಮಾರಂಭದ ಉದ್ಘಾಟನೆಯನ್ನು ಉದ್ಯಮಿ ಎಂ. ಗಣಪತಿ ಪೈ ನೆರವೇರಿಸಿ, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ದೇಶ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಫಲ ರಹಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅಸಂಖ್ಯಾತ ಕಾರ್ಯಕರ್ತರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮತ್ತು ಕಸದಿಂದ ರಸ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಾದವರಿಗೆ ಪುರಸಭಾ ಸದಸ್ಯೆ ಸುಮಾಕೇಶವ್ ಬಹುಮಾನ ವಿತರಿಸಿದರು. ತೀರ್ಪುಗಾರರ ಪರವಾಗಿ ಸದಾಶಿವ ಕಾಮತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಕಳ ಶಾಖೆಯ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮೀ ಸಭಾಧ್ಯಕ್ಷತೆ ವಹಿಸಿ ಶಿವರಾತ್ರಿ ಹಬ್ಬದ ರಹಸ್ಯದ ಬಗ್ಗೆ  ತಿಳಿಸಿದರು. ಬಿ.ಕೆ. ಶಶಿಕಲಾ ಹಾಗೂ ಬಿ.ಕೆ. ಇಂದಿರಾ ಸ್ವಾಗತಿಸಿದರು. ಬಿ.ಕೆ. ಗಾಯತ್ರಿ, ಸಂಸ್ಥೆಯ ಪರಿಚಯ ನೀಡಿ ರಾಜಯೋಗ ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಅಕ್ಷತಾ  ಮತ್ತು ಕುಮಾರಿ ಸಹನಾ ಜೈನ್‌ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು, ಬಿ.ಕೆ. ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.