ಕಾರ್ಕಳ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ರೂಪದರ್ಶಿಗಳಿಂದ ನೂತನ ಮಾದರಿಯ ಕಾಂಜಿವರಂ ಸೀರೆಗಳ ಬಿಡುಗಡೆ ಕಾರ್ಯಕ್ರಮವು ಭಾನುವಾರ ಮುಕ್ತವಾಹಿನಿಯ ಸಹಯೋಗದೊಂದಿಗೆ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ ನಲ್ಲಿ ನಡೆಯಿತು.
ಪೂರ್ಣಿಮಾ ಸಮೂಹ ಸಂಸ್ಥೆಯ ಹಿರಿಯರಾದ ಉಮಾನಾಥ ಪ್ರಭು, ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿದ್ಯಾಲಯದ ರಿಜಿಸ್ಟ್ರಾರ್ ಯೋಗಿಶ್ ಹೆಗ್ಡೆ ಮಾತನಾಡುತ್ತಾ, ಪೂರ್ಣಿಮಾ ಪಾಂಡುರಂಗ ಪ್ರಭುರವರ ಯೋಜನೆ ಹಾಗೂ ಯೋಚನೆಯನ್ನು ಇಂದು ರವಿಪ್ರಕಾಶ್ ಪ್ರಭುರವರು ನೆರವೇರಿಸಿ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ನಲ್ಲಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು.
ಪೂರ್ಣಿಮಾ ಸಿಲ್ಕ್ಸ್ನ ಪಾಲುದಾರರಾದ ರವಿಪ್ರಕಾಶ್ ಪ್ರಭು ಮಾತನಾಡಿ, ಸಂತೃಪ್ತ ಗ್ರಾಹಕನೇ ಶಾಶ್ವತ ಆಸ್ತಿ, ಗ್ರಾಹಕರ ಆರ್ಶಿವಾದವೇ ಶ್ರೀರಕ್ಷೆ ಎಂದರು.
ಒಂದನೇ ವಾರ್ಷಿಕೋತ್ಸವದ ಅಂಗವಾಗಿ ದೀಪಾವಳಿ ಹಬ್ಬದ ಸಲುವಾಗಿ ಎಲ್ಲಾ ಗ್ರಾಹಕ ಬಂಧುಗಳಿಗೆ ಶೇ. 10 ವಿಶೇಷ ರಿಯಾಯಿತಿ ಘೋಷಿಸಿದರು. ಸಂಸ್ಥೆಯ ಲಾಭಾಂಶದ ಒಂದು ಭಾಗವನ್ನು ಬಡವರ ಶಿಕ್ಷಣಕ್ಕೆ ವಿನಿಯೋಗ ಮಾಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಎಸ್ವಿಟಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಉಷಾ ನಾಯಕ್, ಕಾರ್ಕಳ ಪುರಸಭಾ ಉಪಾದ್ಯಕ್ಷೆ ಪಲ್ಲವಿ ಪ್ರವೀಣ್, ಬಿಜೆಪಿ ಕಾರ್ಕಳ ನಗರ ಅಧ್ಯಕ್ಷ ಅನಂತಕೃಷ್ಣ ಶೆಣೈ, ಕಾರ್ಕಳ ಗ್ರಾಮಾಂತರ ಠಾಣೆಯ ಪೋಲಿಸ್ ಅಧಿಕಾರಿ ನಾಸೀರ್ ಅಹಮದ್, ಉದ್ಯಮಿಗಳಾದ ಭರತ್ ಶೆಟ್ಟಿ, ಕಿಶೋರ್, ಪೂರ್ಣಿಮಾ ಸಮೂಹಸಂಸ್ಥೆಯ ದಿನೇಶ್ ಪ್ರಭು, ಹರಿಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಕಿರಣ ರವಿಪ್ರಕಾಶ್ ಪ್ರಭು ವಿಜೇತರಿಗೆ ಬಹುಮಾನ ವಿತರಿಸಿದರು. ಜೇಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಕೋಟ್ಯಾನ್ ಸ್ಪರ್ಧೆಗಳನ್ನು ನಡೆಸಿದರು. ತೀರ್ಪುಗಾರರಾಗಿ ಚಲನಚಿತ್ರ ನಟಿ ರಕ್ಷಾ ಶೆಣೈ, ಮಾಲಿನಿ ಶೆಟ್ಟಿ ಮತ್ತು ಅನುಷಾ ಪ್ರಭು ಸಹಕರಿಸಿದರು. ರೂಪದರ್ಶಿಗಳ ರೂಪವಿನ್ಯಾಸಕಾರರಾಗಿ ಶಿಲ್ಪಾ ಕಿಣಿ ಮತ್ತು ರಾಖಿ ಭಟ್ ಭಾಗವಹಿಸಿದ್ದರು. ಶಿವ ಜಾಹಿರಾತು ಸಂಸ್ಥೆಯ ಮಾಲಿಕ ವರದರಾಯ ಪ್ರಭು ಧನ್ಯವಾದ ಅರ್ಪಿಸಿದರು.
ಸಮಾರಂಭದ ಅಂಗವಾಗಿ ಜೋಡುರಸ್ತೆಯ ಹೋಟೆಲ್ ಉಷಾ ಸಭಾಂಗಣದಲ್ಲಿ ಮಿಸ್ ಪೂರ್ಣಿಮಾ, ಮಿಸಸ್ ಪೂರ್ಣಿಮಾ, ಆದರ್ಶ ದಂಪತಿ, ಮಕ್ಕಳಿಗಾಗಿ ಗೇಮ್ ಶೋಗಳು ನಡೆಯಿತು. ಭಾರತದ ಬೇರೆ ಬೇರೆ ಪ್ರದೇಶದ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಇನ್ನಿತರ ಪಂಗಡಗಳ ವಧುಗಳ ಅಲಂಕಾರದಲ್ಲಿ ರೇಷ್ಮೆ ಸೀರೆಗಳು, ಲೆಹೆಂಗ, ಕುರ್ತ, ಗಾಗ್ರಚೋಲಿ, ಬ್ರೈಡಲ್ ಡ್ರೆಸ್ಗಳೊಂದಿಗೆ ಹಾಗೂ ವೆಸ್ಟರ್ನ್ ಡ್ರೆಸ್ ಗಳಲ್ಲಿ ಜಗಮಿಸಿದರು.