ಕಾರ್ಕಳದಲ್ಲಿ 10,000 ಸಸಿಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ : ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಅಭಿವೃದ್ಧಿ ಚಟುವಟಿಕೆಗೆ ಕೊನೆಯಿಲ್ಲ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ‌ ಜಗತ್ತಿನಲ್ಲಿ ಅಭಿವೃದ್ಧಿ ಬಹಳ ವೇಗವಾಗಿ ಬೆಳೆಯುತ್ತಿವೆ. ಭೂಮಿಯಲ್ಲಿ ‌ನೀರಿಲ್ಲ ,ಒಳ್ಳೆಯ ಗಾಳಿ ಸಿಗಲ್ಲ ಎಂದಾಗ ಜನಪ್ರತಿನಿಧಿಯಾಗಲಿ ಯಾವುದೇ ಸರಕಾರ ಏನು ಮಾಡಲು ಸಾದ್ಯವಿಲ್ಲ. ಗಿಡಗಳನ್ನು‌ ನೆಟ್ಟು ಪರಿಸರವನ್ನು ಉಳಿಸೋಣ ಸ್ವರ್ಣ ಕಾರ್ಕಳ ಸ್ವಚ್ಛ ‌ಕಾರ್ಕಳ ನಿರ್ಮಾಣ ಮಾಡುವ ಕಡೆಗೆ ಎಲ್ಲರ ಸಹಕಾರ ಅಗತ್ಯ ಎಂದು ಕಾರ್ಕಳ ಶಾಸಕ‌ ಹಾಗೂ ವಿರೋಧ ಪಕ್ಷದ ಮುಖ್ಯಸಚೇತಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.

ಅವರು ಶುಕ್ರವಾರ ಕುಕ್ಕುಂದೂರು‌ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಪರಿಸರ ಸಂರಕ್ಷಣಾ ಸಮಿತಿ ಕಾರ್ಕಳ,ಅರಣ್ಯ ‌ಇಲಾಖೆ ಕಾರ್ಕಳ ತಾಲೂಕು ‌ಪಂಚಾಯತ್ ,ಪುರಸಭೆ ‌ಕುಕ್ಕುಂದೂರು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ವ ಮೇವ ಜಯತೆ ಹಸಿರು ಕರ್ನಾಟಕ ಪರಿಸರ ಉತ್ಸವದ ಅಂಗವಾಗಿ ಕಾರ್ಕಳ ತಾಲೂಕಿನಾದ್ಯಂತ  ಎಲ್ಲಾ ಪುರಸಭೆ ಹಾಗೂ ಗ್ರಾಮ ಪಂಚಾಯತ್
ವ್ಯಾಪ್ತಿಯಲ್ಲಿ ಗಿಡಗಳನ್ನು ನಡೆಲು 10ಸಾವಿರ‌ಸಸಿಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನೀರಿನ ಅಂತರ್ಜಲ ಮೂಲ ಹೇಗೆ ಹೆಚ್ಚಿಸುವುದು, ನಮ್ಮ ಪರಿಸರವನ್ನು ಹೇಗೆ ರಕ್ಷಿಸಿವುದು ದಿನ ನಿತ್ಯದ ತಾಜ್ಯ ವಿಲೇವಾರಿ ಕುರಿತು ಸಮಾಜದ ಎದುರಿಸುತ್ತಿರುವ ಮೂರು ಸವಾಲುಗಳಾಗಿವೆ.  ಸವಾಲುಗಳನ್ನು ಜವಾಬ್ದಾರಿ ಯಾಗಿಸಿ ಕೊಂಡಾಗ ಪರಿಸರ ತನ್ನಿಂದ‌ ತಾನೇ ಅಭಿವೃದ್ಧಿ ಯತ್ತ ಸಾಗುತ್ತದೆ. ಪಶ್ಚಿಮ ಘಟ್ಟದ ತಪ್ಪಲು ಜಗತ್ತಿನ ಅತ್ಯಂತ ಉತ್ತಮ ಪ್ರದೇಶ ಅಗಿದೆ. ಇಂದು ನಮಗೆ ನೀರಿನ ಕೊರೆತೆ ಉಂಟಾಗಿದೆ ಮಳೆ ಬಾರದೆ ಇರುವುದು ಕಂಡಾಗ ಜಾಗೃತಿ ವಹಿಸಬೇಕಾಗಿದೆ. ನೀರಿನ ಬಳಕೆ ,ಸದ್ವಬಳಕೆ ನೀರಿನ ಅಂತರ್ಜಲ ಕಪಾಡುವಂತದ್ದು ಪರಿಸರದಲ್ಲಿ ‌ಗಿಡಗಳನ್ನು ವರ್ಷದಿಂದ ವರ್ಷಕ್ಕೆ ಏರಿಕೆ‌ಮಾಡುವಂತದ್ದು ನಮ್ಮ ಮನೆಯ ತ್ಯಾಜ್ಯವನ್ನು ನಾವೇ ವಿಲೇವಾರಿ ಮಾಡುವಂತದ್ದು ಜತೆಗೆ 150 ನೇ ಗಾಂಧಿ‌ಜಯಂತಿಯ ಅಚರಣೆಯ ಪ್ರಯುಕ್ತ ನಮ್ಮ ವಠಾದಲ್ಲಿ 150 ಮೀಟರ್ ನಷ್ಟು ಸ್ವಚ್ಛತೆ ವಾಗಿಸುವಂತದ್ದು ಈ ಕಲ್ಪನೆಯೊಂದಿಗೆ ಇಡೀ ತಾಲೂಕಿನ ಪರಿಸರ ಉತ್ಸವದ ಅಚರಣೆ ನಡೆಯುತ್ತಿದೆ ಎಂದರು. ತಾಪಂ ಅದ್ಯಕ್ಷೆ ಮಾಲಿನಿ ಜೆ ಶೆಟ್ಟಿ ‌ಮಾತನಾಡಿದರು.
ಅರಣ್ಯ ವಲಯಅಧಿಕಾರಿ ‌ದಿನೇಶ್ ಮಾತನಾಡಿ , ಜಗತ್ತಿನಲ್ಲಿ ಮನಷ್ಯ ಪ್ರಾಣಿ ಪಕ್ಷಿ, ಜೀವ ಸಂಕುಲಗಳಿಗೆ ವಾಸಿಸಲು ಯೋಗ್ಯವಾಗಿರುವುದು ಭೂಮಿ ಅದರಲ್ಲೂ ಕರಾವಳಿ ಬಾಗಕ್ಕೆ ದೇವರ ನಾಡು ಎಂಬ ಹೆಸರಿದೆ. ಇಂತಹ ಸಂದರ್ಭಗಳಲ್ಲಿ ‌ಪರಿಸರ ದೇವತೆಗೆ ಉತ್ಸವ ಮೂಲಕ ನಾವೆಲ್ಲಾ ಅರಾದಿಸುವ ಕಂಡಾಗ ನಾವೆಲ್ಲಾ ಎಷ್ಟು ಕೆಳಹಂತಕ್ಕೆ ತಲುಪಿದ್ದೇವೆ ಎನ್ನುವುದು ತಿಳಿಯುತ್ತದೆ ಎಂದರು.

ತಾಪಂ ಉಪಾಧ್ಯಕ್ಷ ಗೋಪಾಲ್ ಮೂಲ್ಯ, ಜಿ ಪಂ ಸದಸ್ಯ‌ ಉದಯ ಎಸ್ ಕೋಟ್ಯಾನ್, ಜಿಪಂ ಸದಸ್ಯ‌ ಸುಮಿತ್ ಶೆಟ್ಟಿ, ಜಿ ಪಂ ಸದಸ್ಯ ‌ರೇಶ್ಮಾ ಶೆಟ್ಟಿ, ದಿವ್ಯ ಗಿರಿಶ್ ಅಮಿನ್ ಜ್ಯೋತಿ‌ ಹರೀಸ್ , ಕುಕ್ಕುಂದೂರು ಪಂಚಾಯತ್ ಉಪಾಧ್ಯಕ್ಷ ರಾಜೇಶ್ ರಾವ್ ಪರಪು, ಹೆಬ್ರಿ ತಾಹಸಿಲ್ದಾರ್ ಮಹೇಶ್ ಚಂದ್ರ, ಮೂಡಬಿದ್ರೆ ವಲಯ ಅರಣ್ಯಾದಿಕಾರಿ ಪ್ರಕಾಶ್ ಪೂಜಾರಿ, ವಲಯ ಅರಣ್ಯಾದಿಕಾರಿ ವಾರಿಜಾಕ್ಷಿ ,ಸುಬ್ರಹ್ಮಣ್ಯ ಅಚಾರ್ಯ, ಮುಖ್ಯಾ ಅತಿಥಿಗಳಾಗಿ ವೇದಿಕೆಯಲ್ಲಿ ‌ಉಪಸ್ಥಿತರಿದ್ದರು.
ತಾಪಂ ಕಾರ್ಯ‌ನಿರ್ವಹಣಾಧಿಕಾರಿ ಮೇಜರ್ ಹರ್ಷ ಸ್ವಾಗತಿಸಿದರು, ನಲ್ಲುರು ಶಿಕ್ಷಕ ನಾಗೇಶ್ ಕಾರ್ಯಕ್ರ ನಿರೂಪಿಸಿ ವಂದಿಸಿದರು .