ವರದಿ : ಸಂಪತ್ ಚರಣ್ ಕಾರ್ಕಳ
ಕಾರ್ಕಳ : ಇನ್ನು ಮುಂದೆ ನಕ್ಸಲ್ ಕೊಂಬಿಂಗ್ ಕಾರ್ಯಚರಣೆ ವೇಳೆ ನಕ್ಸಲ್ ಜಾಡು ಹಿಡಿಯುವ ಜತೆ ನೆಲಬಾಂಬ್ ಪತ್ತೆಗಾಗಿ ಎಎನ್ಎಫ್ ಸಿಬ್ಬಂದಿ ಗಳ ಜತೆ ಪೊಲೀಸ್ ಶ್ವಾನಗಳು ತಮ್ಮ ಕಾರ್ಯಚರಣೆ ನಡೆಸಲಿವೆ. ಅದಕ್ಕಾಗಿ ರಾಮ ಸಮುದ್ರದ ಬಳಿಯಲ್ಲಿರುವ ಎಎನ್ಎಫ್ ಕ್ಯಾಂಪಸ್‌ನಲ್ಲಿ ಸರಕಾರದದಿಂದ ಎಎನ್ಎಫ್ ಅನುದಾನದ ಮೂಲಕ ಸುಮಾರು 22 ಲಕ್ಷ ವೆಚ್ಚದಲ್ಲಿ ಶ್ವಾನಗಳಿಗಾಗಿ 1200 ಚದರ ಅಡಿ ವಿಸ್ತೀರ್ಣದ ಕ್ಯಾನಲ್ ಹೌಸ್ ನಿರ್ಮಾಣವಾಗುತ್ತಿದೆ. ನಾಲ್ಕು ಶ್ವಾಸಗಳಿಗಾಗಿ ನಿರ್ಮಾಣಗೊಳ್ಳುತ್ತಿರುವ ಈ ಕ್ಯಾನಲ್ ಹೌಸ್ ಇದಾಗಿದ್ದು ಇನ್ನು ನಾಲ್ಕು ತಿಂಗಳ ಬಳಿಕ ಇಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು ಶ್ವಾನಗಳು ಈ ನೂತನ ಕ್ಯಾನಲ್ ಹೌಸ್ ಗೆ ಗ್ರಹ ಪ್ರವೇಶ ಮಾಡಲಿವೆ.
ಬೆಂಗಳೂರಿನ ಸಿ,ಅರ್,ಪಿ,ಎಫ್ ನಲ್ಲಿ ಬೆಲ್ಜಿಯಂ ಶಫಡ್ ಎಂಬ ತಳಿಯ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟು ನಾಲ್ಕು ಶ್ವಾನಗಳಿಗೆ ತಲಾ ಇಬ್ಬರಂತೆ ಎಂಟು ಸಿಬ್ಬಂದಿ ಗಳನ್ನು ನೇಮಕ ಮಾಡಲಾಗಿದೆ. ನಕ್ಸಲ್ ರ ಜಾಡುಹಿಡಿಯವುದು ನೆಲ ಬಾಂಬ್ ಸ್ಪೋಟ ದ ಕುರಿತಂತೆ ಇನ್ನು ಹಲವು ಅಪರಾಧಗಳಿಗೆ ಸಂಬಂದಿಸಿದಂತೆ ಪತ್ತೆ ಹಚ್ಚುವ ವಿಶೇಷ ತರಬೇತಿಯನ್ನು ಈ ಶ್ವಾನಗಳಿಗೆ ನೀಡಲಾಗುತ್ತಿದೆ. ಇನ್ನು ಮುಂದೆ ನಕ್ಸಲ್ ಕೊಂಬಿಂಗ್ ಕಾರ್ಯಚರಣೆ ವೇಳೆ ಈ ಶ್ವಾನಗಳು ಎಎನ್ಎಫ್ ಸಿಬ್ಬಂದಿ ಗಳ ಜತೆ ಅರಣ್ಯಗಳಿಗೆ ತೆರಳಿ ಕಾರ್ಯಚರಣೆ ನಡೆಸಲಿವೆ.
ಈ ಶ್ವಾನಗಳಿಗೆ ಈಗಾಗಲೇ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. ಕಾಮಗಾರಿ ಮುಗಿದ ಬಳಿಕ ಇಲ್ಲೇ ಅವಗಳಿಗೆ ಹೆಚ್ಚು ವರಿ ತರಬೇತಿ ನೀಡಲಾಗುದು ಎನ್ನುತ್ತಾರೆ ಎಎನ್ಎಫ್ ಡಿವೈಎಸ್ಪಿ ಬೆಳ್ಳಿಯಪ್ಪ