ಕಾರ್ಕಳ: ಇಲ್ಲಿನ ಜೋಡುರಸ್ತೆಯ ಪ್ರೈಮ್ ಮಾಲ್ ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಮಳಿಗೆ ಗುರುವಾರ ಉದ್ಘಾಟನೆಗೊಂಡಿದೆ.
ಮಳಿಗೆಯನ್ನು ಉದ್ಘಾಟಿಸಿ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ಪೂರ್ಣಿಮಾ ಸಮೂಹ ಸಂಸ್ಥೆಗೆ 72 ವರ್ಷಗಳ ಇತಿಹಾಸವಿದೆ. ಗ್ರಾಹಕರಿಗೆ ನೀಡಿದ ಸೇವೆಯ ಸತ್ಕಾರ್ಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಆ ಮೂಲಕ ಐದನೇ ಶಾಖೆ ಲೋಕಾರ್ಪಣೆಗೊಂಡಿದೆ.
ಅಮೃತ ಮಹೋತ್ಸವ ಆಚರಿಸುವ ಸಂದರ್ಭ ಕಾರ್ಕಳದ ಜತೆಗೆ ಸುತ್ತಮುತ್ತಲ ಊರುಗಳಲ್ಲೂ ಈ ಸಂಸ್ಥೆಯ ವಿಸ್ತೃತ ಶಾಖೆಗಳು ತೆರೆದುಕೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕರಾದ ಪಾಂಡುರಂಗ ಪ್ರಭು ಅವರು ಸಾಮಾಜಿಕ ಚಟುವಟಿಕೆಗಳ ಜತೆ ರಾಷ್ಟ್ರೀಯ ಚಟುವಟಿಕೆಯಲ್ಲೂ ಭಾಗಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾತನಾಡಿ, 1966 ರಲ್ಲಿ ಧರ್ಮಸ್ಥಳದ ಬಾಹುಬಲಿ ಕಾರ್ಕಳದ ಮಂಗಳಪಾದೆಯಲ್ಲಿ ಕೆತ್ತಲ್ಪಟ್ಟಿತ್ತು. ಆ ಸಂದರ್ಭ ಡಾ.ಹೆಗ್ಗಡೆ ಅವರು ಕಾರ್ಕಳಕ್ಕೆ ಆಗಮಿಸಿದ್ದ ವೇಳೆ ಪಾಂಡುರಂಗ ಪ್ರಭು ಅವರ ಪರಿಚಯವಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಕುಟುಂಬದ ಜತೆ ನಮಗೆ ಅನ್ಯೋನ್ಯತೆಯಿದೆ ಎಂದರು.