ಕಾರ್ಕಳ ಪುರಸಭಾ ವ್ಯಾಪ್ತಿಯ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಮುಖ್ಯಾಧಿಕಾರಿ ರೇಖಾಶೆಟ್ಟಿ ಅವರ ನಡೆಗೆ ಸಾರ್ವಜನಿಕರ ಮೆಚ್ಚುಗೆ

ಕಾರ್ಕಳ: ಕಾರ್ಕಳ ಪುರಸಭಾ ಪುರಸಭಾ ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ,ಒಳಚರಂಡಿ ಸಮಸ್ಯೆ ಸೇರಿದಂತೆ ಕೆಲವು ಸಾರ್ವಜನಿಕರ ಸಮಸ್ಯೆಗಳೇ ಅಧಿಕವಾಗಿದ್ದವು. ಇಲ್ಲಿನ ಹವಾಲ್ದಾರ್ ಬೆಟ್ಟಿನ ಚರಂಡಿ ನೀರು ಸಾರ್ವಜನಿಕರ ಬಾವಿಗಳಿಗೆ ಸೇರಿ ಕಲುಷಿತಗೊಂಡು ಪುರಸಭಾ ವ್ಯಾಪ್ತಿಯ ನೀರು ಬಳಕೆಗೆ ಅಯೋಗ್ಯವಾಗಿತ್ತು. ಮುಖ್ಯ ರಸ್ತೆಯ ಚರಂಡಿ ಕಾಮಗಾರಿಯೂ ಅಪೂರ್ಣ ಸ್ಥತಿಯಲ್ಲಿತ್ತು. ಆದರೆ ಕೆಲವೇ ಸಮಯದಲ್ಲಿ ಮುಖ್ಯಾಧಿಕಾರಿಯವರ ಮುತುವರ್ಜಿಯಿಂದ  ಈ ಎಲ್ಲಾ ಸಮಸ್ಯೆಗಳು ಪುರಸಭಾ ವ್ಯಾಫ್ತಿಯಲ್ಲಿ ಪರಿಹಾರ ಕಂಡಿವೆ.

ಹೌದು ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರ ಮುತುವರ್ಜಿಯಿಂದ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರ ಲಭಿಸಿದ್ದು ಪುರಸಭಾ ವ್ಯಾಪ್ತಿಯ ಜನರು ನಿಟ್ಟುಸಿರುಬಿಡುವಂತಾಗಿದೆ. ಕೆಲವು ವರ್ಷಗಳಿಂದ ಪುರಸಭೆಯ ನಳ್ಳಿನೀರು ಸಂಪರ್ಕ ಹೊಂದಿರುವವರಿಗೆ ಆಗಾಗ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಗಮಿನಿಸಿ ಮುಖ್ಯಾಧಿಕಾರಿಯವರು ಆಗಾಗ ಇಂತಹ ಸಮಸ್ಯೆಗಳು ಉಂಟಾಗದಂತೆ ಸಕಾಲ ನೀರು ಪೂರೈಕೆಗೆ ಬೇಕಾದ ಪಂಪು, ಟ್ರಾನ್ಸ್ ಫಾರ್ಮರ್ ಗಳನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮಕೈಗೊಂಡಿದ್ದಾರೆ.

ಮುಖ್ಯಾಧಿಕಾರಿ ರೇಖಾ ಶೆಟ್ಟಿ

ಮುಖ್ಯಾಧಿಕಾರಿಯವರು ವೈಯಕ್ತಿಕ ಆಸಕ್ತಿ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುತುವರ್ಜಿವಹಿಸಿಕೊಂಡಿದ್ದು ಪುರಸಭಾ ನಾಗರಿಕರ ಮೆಚ್ಚುಗೆಗೂ ಪಾತ್ರವಾಗಿದೆ. ನೀರು ಪೂರೈಸುವ ಪಂಪು, ಟ್ರಾನ್ಸ್ ಫಾರ್ಮರ್, ಮೋಟಾರ್ ಗಳಿಗೆ ಮಳೆಗಾಲದಲ್ಲಿ ಪ್ರಾಕೃತಿಕ ಹಾನಿ ಉಂಟಾದಾಗ ಖುದ್ದಾಗಿ ಸ್ಥಳಕ್ಕೆ ಧಾವಿಸಿ ನುರಿತ ಕೆಲಸಗಾರರಿಂದ ತುರ್ತಾಗಿ ದುರಸ್ತಿ ಮಾಡಿಸುತ್ತಿರುವುದರಿಂದ ನೀರಿನ ಸಮಸ್ಯೆ ಭಾದಿಸಿಲ್ಲ ಎನ್ನುವುದು ಪುರಸಭಾ ವ್ಯಾಪ್ತಿಯ ನಾಗರಿಕರ ಅಭಿಪ್ರಾಯ.

ಸಿಬಂದಿ ಕೊರತೆಯ ನಡುವೆಯೂ ಕಾರ್ಯನಿರ್ವಹಣೆ:

ಪುರಸಭೆಯಲ್ಲಿ ಸಿಬಂದಿ ಕೊರತೆ ಇರುವುದರಿಂದ ಸಾರ್ವಜನಿಕ ಸೇವೆಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನರಿತ ಮುಖ್ಯಾಧಿಕಾರಿ ರೇಖಾಶೆಟ್ಟಿ ಅವರು, ಇರುವ ಸಿಬಂಧಿ, ಅಧಿಕಾರಿಗಳಿಗೆ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಪರಿಣಾಮ. ಇದುವರೆಗೆ ಸಾರ್ವಜನಿಕ ಸಮಸ್ಯೆಗೆ ಪರಿಹಾರಕೊಡಲು ಅನುಕೂಲವಾಗಿದೆ.

ಉಳಿದಂತೆ ಜಲನಿಧಿ, ಈ ಖಾತೆ ಮೊದಲಾದವುಗಳ ಕಂಪ್ಯೂಟರೀಕಣ ಮಾಡಿಸಿದ್ದರಿಂದ ಕಾರ್ಯನಿರ್ವಹಣೆಗೆ ಅನುಕೂಲವಾಗಿದೆ. ಇದರಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಸಾಧ್ಯವಾಗಿದ್ದು ಜನರಿಗೂ ಪುರಸಭೆ ಹತ್ತಿರಾಗಿದೆ. ಸಿಬಂಧಿ ಕೊರತೆಯ ನಡುವೆಯೂ ಪುರಸಭೆಯ ಕಾರ್ಯನಿರ್ವಹಣೆ ಜನತೆಯ ಮೆಚ್ಚುಗೆಗೂ ಪಾತ್ರವಾಗಿದೆ. ಜಾಹೀರಾತು, ಕಟ್ಟಡ ಪರವಾನಗಿ, ಟ್ರೇಡ್ ಪರವಾನಗಿ ಮೊದಲಾದವುಗಳ ಸೇವೆಯನ್ನು ಕ್ಲಪ್ತ ಸಮಯಕ್ಕೆ ಒದಗಿಸಿ ಪುರಸಭಾ ಆದಾಯದಲ್ಲೂ ಏರಿಕೆಯಾಗಿದೆ.

ಪುರಸಭಾ ವ್ಯಾಫ್ತಿಯಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರನ್ನು ಸಂಪರ್ಕಿಸಿದರೆ ಶೀಘ್ರವೇ ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಡುತ್ತಾರೆ. ಇಂತಹ ಅಧಿಕಾರಿಗಳಿದ್ದರೆ ನಮಗೆ ಮಧ್ಯವರ್ತಿಗಳ ಕಾಟ ತಪ್ಪುತ್ತದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೂ ಇದು ಅನುಕೂಲ ಎನ್ನುತ್ತಾರೆ ಪುರಸಭೆಯ ನಿವಾಸಿ ಶ್ರೀಜಿತ್ ಕೆ.ಜಿ
ಯಾವುದೇ ಮಧ್ಯವರ್ತಿಗಳು ಬೇಡ ನಿಮ್ಮ ಕೆಲಸ ನಾನು ಮಾಡಿಕೊಡುವೆ: ರೇಖಾ ಶೆಟ್ಟಿ

“ಸಾರ್ವಜನಿಕರು ಪುರಸಭಾ ವ್ಯಾಪ್ತಿಯ ಏನೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.ಮಧ್ಯವರ್ತಿಗೆ ಹಣ ಕೊಟ್ಟು ಜನರು ಮೋಸ ಹೋಗುತ್ತಿದ್ದಾರೆ. ಇಂತಹ ಅಸಹಾಯಕತೆಯಿಂದ ತುಂಬಾ ಮಂದಿ ಸೋತುಹೋಗಿದ್ದಾರೆ.ಇದಕ್ಕೆಲ್ಲಾ ಅವಕಾಶ ಕೊಡಲಾರೆ. ನಿಮ್ಮ ಸಮಸ್ಯೆಗಳೇನಿದ್ದರೂ ನನ್ನನ್ನೇ ಸಂಪರ್ಕಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡುತ್ತೇನೆ ಎನ್ನುತ್ತಾರೆ” ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು. ರೇಖಾ ಶೆಟ್ಟಿ ಅವರ ಸಂಪರ್ಕ(9900948873)

ಜನರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡುತ್ತಿರುವ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರ ಕಾರ್ಯ ನಿರ್ವಹಣೆ ಇದೀಗ ಪುರಸಬಾ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.