udupixpress
Home Trending ಕಾರ್ಕಳ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ: ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಣೆ

ಕಾರ್ಕಳ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ: ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಣೆ

ಕಾರ್ಕಳ: ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟು ಮತ್ತು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಆನೆಕೆರೆ, ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಮುದ್ದುಕೃಷ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ಕಾಬೆಟ್ಟು ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಜರಗಿತು.

ಬಹುಮಾನ ವಿತರಣೆಯನ್ನು ಕಾಬೆಟ್ಟು ಪುರಸಭಾ ಸದಸ್ಯೆ ಮಾಜಿ ಅಧ್ಯಕ್ಷೆ ರೆಹಮತ್ ಶೇಖ್, ದೇವಸ್ಥಾನದ ಧರ್ಮದರ್ಶಿ ಸಂಕೇತ್ ಉಪಾಧ್ಯಯ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ. ವರದರಾಯ ಪ್ರಭು, ಕಾಬೆಟ್ಟು ವೇಣುಗೋಪಾಲ ಕೃಷ್ಣ ದೇವಸ್ಥಾನದ ಜೀಣೋದ್ದಾರ ಸಮಿತಿಯ ಅಧ್ಯಕ್ಷ ದಿನೇಶ್ ಪ್ರಭು ಕಲ್ಲೊಟ್ಟೆ, ಕಾರ್ಯದರ್ಶಿ ಸುಧೀರ್ ಶೆಟ್ಟಿಗಾರ್, ಉಪಾಧ್ಯಕ್ಷ ಕೇಸರಿ ಹೆಗ್ಡೆ ವಿತರಿಸಿದರು.

೦-೨ ವರ್ಷದ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪ್ರಣಾಮ್, ದ್ವಿತೀಯ ಸನ್ಮಿತ ಸಾಲ್ಯಾನ್, ತೃತೀಯ ಸಕ್ಷಮ್, ೨-೪ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಸಂಸ್ಕೃತಿ, ದ್ವಿತೀಯ ಆರುಷ್, ತೃತೀಯ ಶ್ರೀಯಾ, ೪-೭ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಪ್ರತ್ಯುಶ್ ಕುಂದರ್, ದ್ವಿತೀಯ ಸಾಹಿತ್ಯ, ತೃತೀಯ ಅನ್ವಿ ಮತ್ತು ತನಿಷಾ, ೮-೧೨ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಅಶ್ನಿ, ದ್ವಿತೀಯ ಧನ್ಯ ಕುಲಾಲ್, ತೃತೀಯ ಭೂಷಣ್ ಪೈ ಬಹುಮಾನ ಪಡೆದಿದ್ದು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು. ದಿನೇಶ್ ಪ್ರಭು ಸ್ವಾಗತಿಸಿದರು, ವರದರಾಯ ಪ್ರಭು ಧನ್ಯವಾದ ಅರ್ಪಿಸಿದರು, ಶೋಭಾ ಭಾಸ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಓಂಕಾರ್ ಭಜನಾ ಮಂಡಳಿ ಕಾಬೆಟ್ಟು ಇವರಿಂದ ಭಜನೆ ಹಾಗೂ ರಾತ್ರಿ ಶ್ರೀ ದೇವಸ್ಥಾನದಲ್ಲಿ ಕೃಷ್ಣಾಷ್ಠಮಿ ವಿಶೇಷ ಪೂಜೆಯೊಂದಿಗೆ ಪ್ರಸಾದ ವಿತರಿಸಲಾಯಿತು.