ಕಾರ್ಕಳ: ಐದು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಮಹಿಳೆಯನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಇಂದಿರಾ ನಗರದ ನಿವಾಸಿ ಸಂಧ್ಯಾ (36) ಹಾಗೂ ಅವರ ಪುತ್ರಿ ಧ್ರುವಿ (5) ಎಂದು ಗುರುತಿಸಲಾಗಿದೆ.
ಇವರು ಎ. 16ರಂದು ಹೊಸ್ಮಾರ್ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಸ್ಸು ಬರಲಿಲ್ಲ. ಈ ಬಗ್ಗೆ ಪತಿ ಠಾಣೆಗೆ ದೂರು ನೀಡಿದ್ದಾರೆ.