ಕಾರ್ಕಳ: ಜಾನುವಾರು ಅಕ್ರಮ ಸಾಗಟ ಐವರ ಬಂಧನ, ಪಿಕಾಪ್ ವಾಹನದಲ್ಲಿ ಹಿಂಸಾತ್ಮಕ ವಾಗಿ ಗೋಸಾಗಾಟ

ಕಾರ್ಕಳ: ತಾಲೂಕಿನ ಮುಡಾರು ಗ್ರಾಮದ ಕೆಳಭಟ್ರ ಅಂಗಡಿ ಸಮೀಪದಲ್ಲಿ ಅಕ್ರಮವಾಗಿ ಗೋಸಾಗಟ ಮಾಡುತ್ತಿದ್ದ ಐವರನ್ನು ಕಾರ್ಕಳ ಗ್ರಾಮಾಂತ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಕಸ್ಬಾ ಗ್ರಾಮದ ಅಶ್ಮತ್ (25), ಮಂಗಳೂರು ಅಡ್ಡೂರು ಸಮೀಪದ ಬಶೀರ್ (29), ಫರಂಗಿಪೇಟೆ ಪಡು ಗ್ರಾಮದ ಇಮ್ತಿಯಾಜ್ (33), ಮಂಗಳೂರು ಅಡ್ಡೂರಿನ ಮನ್ಸೂರ್ ಹುಸೇನ್ (33), ಹಾಗೂ ಜಾನುವಾರುಗಳನ್ನು ಕಳವುಗೈದು ದಂಧೆಕೋರರಿಗೆ ನೀಡಿದ ಶಿರ್ಲಾಲು ಕೊಡಂಜೆ ನಿವಾಸಿ ಅನಿಲ್ ಪೂಜಾರಿ (28) ಬಂಧಿತ ಆರೋಪಿಗಳು. ಇವರು ಪಿಕಾಪ್ ವಾಹನದಲ್ಲಿ ಹಿಂಸಾತ್ಮಕ ವಾಗಿ ಜಾನುವಾರುಗಳನ್ನು ಕಸಯಿಖಾನೆಗೆ ಸಾಗಿಸುತ್ತಿದ್ದರು. ಈ ವೇಳೆ ಅಕ್ರಮ ಗೋಸಾಗಟ ಬಗ್ಗೆ ಬಜರಂಗ ದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜರಂಗ ದಳ ಆಗ್ರಹ:
ಕಳೆದ ವರ್ಷ ವ್ಯಾಪಕ ಗೋಕಳ್ಳತನ ನಡೆಯುತ್ತಿದ್ದಾಗ ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಹೋರಾಟ ಪ್ರತಿಭಟನೆ ನಡೆಸಲಾಗಿದೆ.
ಬೃಹತ್ ಮುದ್ರಾಡಿ ಚಲೋ ಹೋರಾಟ ನಡಸಲಾಗಿದೆ. ಆ ಬಳಿಕ ಕೆಲ ತಿಂಗಳು ಅಕ್ರಮ ಜಾನುವಾರು ಸಾಗಟ ಇಳಿಮುಖವಾಗಿತ್ತು. ಆದರೆ ಈಗ ಮತ್ತೆ ಕೆಲ ಭಾಗದಲ್ಲಿ ನಡೆಯುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗೋ ರಕ್ಷಾ ಪ್ರಮುಖ್ ಹೆಬ್ರಿ ದಿನೇಶ್ ಶೆಟ್ಟಿ ಆಗ್ರಹಿಸಿದ್ದಾರೆ.