ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಿರಿಯಂಗಡಿ ರಸ್ತೆ ಆನೆಕೆರೆ ಕಾರ್ಕಳ ಇದರ ಸೇವಾ ಕೇಂದ್ರದಲ್ಲಿ ದೀಪಾವಳಿಯ ಆದ್ಯಾತ್ಮಿಕ ಕಾರ್ಯಕ್ರಮ ಮಂಗಳವಾರ ಜರಗಿತು.
ಸೇವಾಕೇಂದ್ರ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮೀ ಮಾತನಾಡಿ, ಸತ್ಯ ದೀಪಾವಳಿ ಆಚರಿಸುವುದರೊಂದಿಗೆ ಮನೆಯನ್ನು ಸ್ವಚ್ಛಗೊಳಿಸುತ್ತಾ ಮನಸ್ಸನ್ನು ಸ್ವಚ್ಛಗೊಳಿಸಬೇಕು ಎಂದರು.
ಕಾರ್ಯಕ್ರಮವನ್ನು ರಾಜೀವಿ ಬನಾನ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಸದಸ್ಯೆ ಪಲ್ಲವಿ ಪ್ರವೀಣ್, ಉದ್ಯಮಿ ಸುನೀಲ್ ಶೆಟ್ಟಿ , ನಿವೃತ್ತ ವಿಜಯ ಬ್ಯಾಂಕ್ ಮ್ಯಾನೆಜರ್ ಸದಾನಂದ ಶೆಟ್ಟಿ ಶುಭ ಹಾರೈಸಿದರು. ಬಿ.ಕೆ. ವರದರಾಯ ಪ್ರಭು ಸ್ವಾಗತಿಸಿದರು. ಬಿ.ಕೆ. ಅನಿತಾ ವಂದಿಸಿದರು.