ಕಾರ್ಕಳ: ಅಸ್ವಸ್ಥಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ತಾರೆದಡ್ಡು ಎಂಬಲ್ಲಿ ನಡೆದಿದೆ.
ಈದು ಗ್ರಾಮದ ತಾರೆದಡ್ಡು ನಿವಾಸಿ 34 ವರ್ಷದ ಮಮತಾಶ್ರೀ ಮೃತ ದುರ್ದೈವಿ. ಇವರು ಫೆ. 28ರಂದು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಿಸದೆ ಮಮತಾಶ್ರೀ ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.