ಕಾರ್ಕಳ: ಕುಸಿದು ಬಿದ್ದು ವ್ಯಕ್ತಿ ಮೃತ್ಯು

ಕಾರ್ಕಳ: ಮಾಳ ಚೆಕ್ ಪೊಸ್ಟ್ ಬಳಿ ಕ್ಯಾಂಟಿನ್ ನಡೆಸಿಕೊಂಡಿದ್ದ ವ್ಯಕ್ತಿಯೊಬ್ಬರು ರಾತ್ರಿ ಕ್ಯಾಂಟಿನ್‌ನಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಮಾಳ ಗ್ರಾಮದ ಮಲ್ಲಾರು ನಿವಾಸಿ ಗಿರೀಶ್ ಪ್ರಭು(49) ಎಂದು ಗುರುತಿಸಲಾಗಿದೆ.

ಇವರು ಆ.9ರಂದು ಕ್ಯಾಂಟಿನ್‌ಗೆ ಹೋಗಿ ಕೆಲಸ ಮಾಡಿ ರಾತ್ರಿ 12ಗಂಟೆಗೆ ಮನೆಗೆ ಬಂದು ಮೊಬೈಲ್ ಚಾರ್ಜರ್ ತೆಗೆದುಕೊಂಡು ಕ್ಯಾಂಟಿನ್‌ಗೆ ಹೋಗಿದ್ದರು. ಆ.10ರಂದು ಬೆಳಗ್ಗೆ ಹೋಗಿ ನೋಡುವಾಗ ಗಿರೀಶ್ ಪ್ರಭು ನೆಲದ ಮೇಲೆ ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.