ಕಾರ್ಕಳ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳವು: ಪ್ರಕರಣ ದಾಖಲು

ಕಾರ್ಕಳ : ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಘಟನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಸಾಲ್ಮರ ಎಂಬಲ್ಲಿ ನಡೆದಿದೆ.

ಸಾಲ್ಮರದ ಅಂಗಡಿಯೊಂದರಲ್ಲಿ ಎ.ಸಿ. ಮೆಕ್ಯಾನಿಕ್ ಆಗಿರುವ ಮಹಮ್ಮದ್ ರಮೀಝ್ ಎಂಬುವವರು ಜ.17 ರಂದು ಮಧ್ಯಾಹ್ನ ಯಮಹಾ ಬೈಕ್‌ ಅನ್ನು ಅಂಗಡಿ ಮುಂಭಾಗ ಬೈಕ್‌ ನಿಲ್ಲಿಸಿ, ಲಾಕ್‌ ಮಾಡಿ ಮಂಗಳೂರಿಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.