ಕಾರ್ಕಳ: ಅಪರಿಚಿತ ವ್ಯಕ್ತಿ‌ ನೇಣಿಗೆ ಶರಣು

ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ನೆಲ್ಲಿಗುಡ್ಡೆ ವಿವೇಕಾನಂದ ನಗರದ ಹಾಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ನೆಲ್ಲಿಗುಡ್ಡೆ ವಿವೇಕಾನಂದ ನಗರದ ಯಶವಂತ ಎಂಬವರ ಅಂಗಡಿಯ ಎದುರಿನ ಹಾಡಿಯಲ್ಲಿ ಜ.24 ರಂದು ಬೆಳಿಗ್ಗೆ 11ಗಂಟೆ ಸುಮಾರಿಗೆ ಕೆಟ್ಟ ವಾಸನೆ ಬರುತ್ತಿದ್ದು, ಹಾಡಿಗೆ ಹೋಗಿ ನೋಡಿದಾಗ 45 ರಿಂದ 50 ವರ್ಷದ ಪ್ರಾಯದ ಗಂಡಸಿನ ಶವ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ‌. ಯಾರೋ ಅಪರಿಚಿತ ವ್ಯಕ್ತಿ ಯಾವುದೋ  ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.