ಕಾರ್ಕಳ: ಆರ್.ಕೆ. ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಮೂಡಿಬಂದಿರುವ ಯುವ ಮನಸ್ಸುಗಳ ಮನಗೆದ್ದಿರುವ ತ್ರಿಕೋನ ಪ್ರೇಮಕಥಾ ಹಂದರ ಹೊಂದಿರುವಂತಹ “ಚಕ್ಷುಶ” ಜನವರಿ 10ರಂದು ಕಾರ್ಕಳ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಅಂದು ಬೆಳಿಗ್ಗೆ 11 ಗಂಟೆಗೆ, 12 ಗಂಟೆಗೆ, 1 ಗಂಟೆಗೆ ಹಾಗೂ 2.30ಕ್ಕೆ ಪ್ರದರ್ಶನ ಕಾಣಲಿದೆ. ಸಿನಿಮಾ ಪ್ರದರ್ಶನದಿಂದ ಬರುವ ಹಣವನ್ನು ವಿಶೇಷ ಮಕ್ಕಳ ಶಾಲೆಗೆ ನೀಡಲಾಗುವುದು ಎಂದು ನಿರ್ದೇಶಕ ರಂಜಿತ್ ಕಾರ್ಕಳ ತಿಳಿಸಿದ್ದಾರೆ.
ಚಿತ್ರಕ್ಕೆ ಸುಪ್ರೀತ್ ಬಿ.ಕೆ, ಪುನೀತ್ ರಾಜ್ ಸಾಹಿತ್ಯ ಒದಗಿಸಿದ್ದಾರೆ. ಆದಿಲ್ ನಡಾಪ್ ಸಂಗೀತ ನೀಡಿದ್ದಾರೆ. ಮನು ಬಿಕೆ ಸಹಕಾರವಿದೆ. ಚಿತ್ರದಲ್ಲಿ ಅಮಿತ್ ಗಂಗೂರ್, ರಚನ ಜೆ. ಶೆಟ್ಟಿ ಶರ್ಮಿಳಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳ ಬೀಟ್ಸ್ ಈಗಾಗಲೇ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಅನಿರುಧ್ ಶಾಸ್ತ್ರಿ ಹಾಡಿರುವ ‘ಬರೆದು ಹಾಡಿದಂತಿದೆ’ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಂಗಡ ಬುಕಿಂಗ್ ಗಾಗಿ ಅಧಿಕೃತ ಜಾಲತಾಣ
(https://iruve.in/collections/chakshusha) ಸಂಪರ್ಕಿಸಬಹುದು ಎಂದು ಚಿತ್ರತಂಡ ತಿಳಿಸಿದೆ.












