ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಸಾಮರಸ್ಯ ನಡಿಗೆಯು ಗಾಂಧಿ ಮೈದಾನದಿಂದ ಬಸು ನಿಲ್ದಾಣದವರೆಗೆ ನಡೆಯಿತು.
ಸಾಮರಸ್ಯ ನಡಿಗೆಯ ಮೊದಲು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಅವರು ಪುಷ್ಪಮಾಲೆಯನ್ನು ಹಾಕಿ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು. ನಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾ ಡಿಸೋಜಾ ಮಾತನಾಡಿ, ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೆಜ್ಜೆ ಹಾಕಿದರು. ನಾವು ಕೂಡ ಬಿಜೆಪಿಯ ಅರಾಜಕತೆಯ ವಿರುದ್ಧ ಹೆಜ್ಜೆ ಹಾಕೋಣ ಎಂದರು.
ಜಿಲ್ಲಾ ವಕ್ತಾರರಾದ ಬಿಪಿನ್ ಚಂದ್ರಪಾಲ್ ಮಾತನಾಡಿದರು.
ಗಾಂಧಿ ಮೈದಾನದಿಂದ ಸಾಗಿದ ಸಾಮರಸ್ಯ ನಡಿಗೆಯು ವೆಂಕಟರಮಣ ದೇವಸ್ಥಾನ ಮೂಲಕ ಸಾಗಿ ಬಸ್ಸು ನಿಲ್ದಾಣ ತಲುಪಿ ಬಸ್ಸು ನಿಲ್ದಾಣದಲ್ಲಿ ಮುಕ್ತಾಯಗೊಂಡಿತು.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್, ಇತಿಹಾಸದಲ್ಲಿ ಗೌತಮಬುದ್ಧರು ಹಾಗು ಯೇಸು ಕ್ರಿಸ್ತರ ಸಾಲಿಗೆ ಗಾಂಧೀಜಿಯವರು ಸೇರುತ್ತಾರೆ ಎಂದು ಭಾರತದ ಕೊನೆಯ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಹೇಳಿದ ಮಾತುಗಳನ್ನು ಸ್ಮರಿಸಿಕೊಂಡರು.
ಹರ್ಷಕುಮಾರ್ ಕುಗ್ವೆ ಮಾತನಾಡಿ, ಗಾಂಧೀಜಿಯವರನ್ನು ಕೇವಲ ಸ್ವಚ್ಛತೆಗೆ ಮಾತ್ರ ಸೀಮಿತಗೊಳಿಸಿ ಅವರ ತತ್ವಾದರ್ಶಗಳನ್ನು ಮರೆಮಾಚುವ ಬಿಜೆಪಿಯವರ ಬಗ್ಗೆ ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಶುಭದ ರಾವ್ ರವರು ಕಾರ್ಯಕ್ರಮ ನಿರೂಪಿಸಿದರು. ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹಾಗೂ ಪುರಸಭಾ ಸದಸ್ಯರಾದ ನಳಿನಾಕ್ಷಿ ಆಚಾರ್ ವಂದಿಸಿದರು.
ಸಾಮರಸ್ಯ ನಡಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ್ ಕೋಟ್ಯಾನ್,. ರಾಜ್ಯ ಕಿಸಾನ್ ಸಮಿತಿಯ ಕಾರ್ಯದರ್ಶಿಯಾದ ಉದಯ ವಿ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾದ ಮಾಲಿನಿ ರೈ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಜಿಲ್ಲಾ ಸಂಘಟಿತ ಕಾರ್ಮಿಕರ ಅಧ್ಯಕ್ಷರಾದ ಗಣೇಶ್ ಪೂಜಾರಿ, ಜಿಲ್ಲಾ ಕಿಸಾನ್ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಕಾಶ್ ಪೂಜಾರಿ, ಜಿಲ್ಲಾ ಆರ್ ಜಿ ಪಿ ಎಸ್ ನ ಕಾರ್ಯದರ್ಶಿ ಭಾನುಬಾಸ್ಕರ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ ಬಂಗೇರ, ಐವನ್ ಮಿರಾಂಡಾ, ದಯಾನಂದ ಶೆಟ್ಟಿ ಅಶ್ಫಾಕ್ ಅಹಮದ್, ಉಪಾಧ್ಯಕ್ಷರುಗಳಾದ ಈದು ವಿಜಯಕುಮಾರ್ ಜೈನ್, ಜಾರ್ಜ್ ಕ್ಯಾಸ್ಟಲಿನೊ, ನಕ್ರೆ ಜಯರಾಮ ಆಚಾರ್ಯ ಕಾರ್ಯದರ್ಶಿಗಳಾದ ಪ್ರತಿಮಾ, ಸುನಿಲ್ ಕೋಟ್ಯಾನ್, ವಿವೇಕಾನಂದ ಶೆಣೈ, ಇರುವ ತ್ತೂರು ಶಂಕರ ದೇವಾಡಿಗ, ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಅಸ್ಲಾಂ ಕಾನೂನು ಸಮಿತಿ ಅಧ್ಯಕ್ಷರಾದ ರಹಮತುಲ್ಲಾ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ರಾಜೇಂದ್ರ ದೇವಾಡಿಗ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನ ಸೇವಾದಳದ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಾಂತಿ ಶೆಟ್ಟಿ ಸಂಘಟನಾ ಕಾರ್ಯದರ್ಶಿ ಫ್ರಾನ್ಸಿಸ್ ಡಿಸೋಜ, ಥೋಮಸ್ ಮಸ್ಕರೇನಸ್ ತಾರಾನಾಥ್ ಕೋಟ್ಯಾನ್ , ಚಂದ್ರರಾಜ ಅಧಿಕಾರಿ, ರಾಮಣ್ಣ ಶೆಟ್ಟಿ ಅಜೆಕಾರು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆಯಾದ ಪ್ಲೊರಾ ಮೆಂಡೋನ್ಸಾ ಮಾಜಿ ಪುರಸಭಾ ಅಧ್ಯಕ್ಷರಾದ ಸುಭೀತ್ ಎನ್ ಆರ್, ಮಾಜಿ ಪುರಸಭಾ ಸದಸ್ಯರಾದ ಶಿವಾಜಿರಾವ್ ಈದು ಜಿನರಾಜ್ ಜೈನ್ ಚಂದ್ರಹಾಸ್ ಪುತ್ರನ್ , ಹಿರಿಯ ಕಾಂಗ್ರೆಸ್ಸಿಗರಾದ ಸಾಣೂರು ಸುಂದರ ಗೌಡ ಸುನಿಲ್ ಕುಮಾರ್ ಭಂಡಾರಿ ಗುರುಪ್ರಸಾದ್ ಆಸ್ಟಿನ್ ಪುಷ್ಪರಾಜ್ ಶೆಟ್ಟಿ ಸತೀಶ್ ಅಂಬ್ಳೇಕರ್ ಪುರಸಭಾ ಸದಸ್ಯೆ ಶ್ರೀಮತಿ ಪ್ರಭ, ಪುರಸಭಾ ಸದಸ್ಯರಾದ ಹರೀಶ್ ದೇವಾಡಿಗ ಸೋಮನಾಥ ನಾಯ್ಕ್ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೋಭಾ, ಅಂಬಾಪ್ರಸಾದ್ ರೀಟಾ ದಾಂತಿ ಆಶಾ ಬೈಲೂರು ಜೊಹಾರ ಅಪರ್ಣ ವಿನ್ನಿ ಬಾಯ್ ಉಷಾ ಸುಮತಿ, ನಯನ, ಸವಿತಾ ಜೈನ್, ಯಶೋಧಾ ಆಚಾರ್ಯ, ಆಶಾ ಬೈಲೂರು, ಹಿರಿಯ ಕಾಂಗ್ರೆಸ್ಸಿಗರಾದ ಸಾಣೂರು ಸುಂದರ ಗೌಡ ಕೆ.ಪಿ ಶಾಂಭವ, ಬಜಗೋಳಿ ಪ್ರಥ್ವಿರಾಜ್ ಜೈನ್, ಹಾಗೂ ಕಾರ್ಯಕರ್ತರು ಗಾಂಧಿ ಅಭಿಮಾನಿಗಳು ಗ್ರಾಮೀಣ ಸಮಿತಿಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಮಾಜಿ ಪಂಚಾಯತ್ ಸದಸ್ಯರುಗಳು, ಮಾಜಿ ಪುರಸಭಾ ಸದಸ್ಯರುಗಳು ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಹಾಗು ಕಾರ್ಕಳ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್ ಕಾರ್ಕಳ ಉಪಸ್ಥಿತರಿದ್ದರು.