ಬೆಂಗಳೂರು: ಚಂದನವನದ ಯುವ ನಟ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ.
ಮಂಗಳವಾರ (ಆ.5) ಖಾಸಗಿ ಆಸ್ಪತ್ರೆಯಲ್ಲಿ ಸಂತೋಷ್ 5 (Santhosh Balaraj) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.
‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರನಾಗಿದ್ದ ಅವರು ಕಳೆದ ಕೆಲ ಸಮಯದಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಜಾಂಡೀಸ್ ಮೈಗೆಲ್ಲ ಹರಡಿದ ಕಾರಣ ಅವರ ಪರಿಸ್ಥಿತಿ ಗಂಭೀರ ಆಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಐಸಿಯುನಲ್ಲಿದ್ದರು ಎಂದು ವರದಿಯಾಗಿದೆ.
ಸಂತೋಷ್ ಅವರ ತಂದೆ ಆನೇಕಲ್ ಬಾಲರಾಜ್ ದರ್ಶನ್ ಅವರಿಗೆ ‘ಕರಿಯ’ ಸಿನಿಮಾವನ್ನು ಮಾಡಿದ್ದರು. ಬಾಲರಾಜ್ ಅವರು 2022ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.
ಸಂತೋಷ್ ಬಾಲರಾಜ್‌ಗೆ ಮದುವೆ ಆಗಿರಲಿಲ್ಲ, ಅವರು ತಾಯಿಯ ಜೊತೆ ವಾಸವಾಗಿದ್ದರು.
ಅವರು ಕನ್ನಡದ ‘ಕರಿಯಾ-2’, ‘ಕೆಂಪ’, ‘ಗಣಪ’, ‘ಬರ್ಕ್ಲಿ’, ‘ಸತ್ಯ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನಪ್ರಿಯರಾಗಿದ್ದರು. ಚಿತ್ರರಂಗದಲ್ಲಿ ಬೆಳೆಯುವ ಹಂತದಲ್ಲಿದ್ದ ಅವರು, ಜಾಂಡೀಸ್ ಕಾಯಿಲೆಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.












