ವೈಜ್ಞಾನಿಕ ರೀತಿಯ ತೆಂಗು ಕೃಷಿಯಿಂದ ಲಾಭ: ಲೀಲಾಧರ ಶೆಟ್ಟಿ

ಉಡುಪಿ: ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ತೆಂಗು ಕೃಷಿ ಮಾಡುವುದರಿಂದ ಒಳ್ಳೆಯ ಆದಾಯ ಗಳಿಸಬಹುದು ಎಂದು ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ಮಜೂರು ಕರಂದಾಡಿ ಗ್ರಾಮ ಸಮಿತಿ ವತಿಯಿಂದ ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಆಯೋಜಿಸಿದ ವೈಜ್ಞಾನಿಕ ತೆಂಗು ಕೃಷಿ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತೆಂಗು ಕೃಷಿಯಲ್ಲಿ ನಾವು ತುಂಬಾ ಹಿಂದೆ ಉಳಿದಿದ್ದು, ಹಳೆಯ ಪದ್ಧತಿಗಳನ್ನೇ ಅನುಸರಿಸುತ್ತಿದ್ದೇವೆ. ತೆಂಗಿನ ಮರಗಳಿಗೆ ಕಟ್ಟೆ ಕಟ್ಟುವುದರಿಂದ ತೆಂಗು ಬೆಳೆಗಾರರಿಗೆ ಹೆಚ್ಚಿನ ಹೊರೆಯೇ ಹೊರತು, ಯಾವುದೇ ಲಾಭವಿಲ್ಲ. ಹಾಗಾಗಿ ತೆಂಗು ಬೆಳೆಗಾರರು ವೈಜ್ಞಾನಿಕ ರೀತಿಯಲ್ಲಿ ತೆಂಗು ಕೃಷಿ ಮಾಡಲು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹಾಗೂ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌ ತೆಂಗು ಕೃಷಿಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಮಜೂರು–ಕರಂದಾಡಿ ಸಮಿತಿ ಅಧ್ಯಕ್ಷ ನಿರ್ಮಲ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.
ಮಜೂರು ಪಡುಮನೆ ಸದಾನಂದ ಶೆಟ್ಟಿ, ರತ್ನಾಕರ ಶೆಟ್ಟಿ ಉಳಿಯಾರಗೋಳಿ, ಬಾಲಕೃಷ್ಣ ಶೆಟ್ಟಿ ಕಾಪು, ಕರಂದಾಡಿ ನಿರಂಜನ್‌ ಶೆಟ್ಟಿ, ಪದ್ಮನಾಭ ಶಾನುಭಾಗ್‌, ದಿನೇಶ್‌ ಶೆಟ್ಟಿ, ಜಯಲಕ್ಷ್ಮೀ ಹೆಗ್ಡೆ, ದಯಾನಂದ ಶೆಟ್ಟಿ ಮಜೂರು, ಆಶಾಲತಾ, ಪ್ರೇಮ, ಸುಗಂಧಿ ನಾಯ್ಕ್‌, ರವಿರಾಜ ಶೆಟ್ಟಿ ಪಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು. ವೇಣುಗೋಪಾಲ ಎಂ. ಪಡುಕಳತ್ತೂರು ಪ್ರಾಸ್ತಾವನೆಗೈದರು.