ಕಾಸರಗೋಡಿನ ಕಲಾವಿದ ಕರಣ್ ಆಚಾರ್ಯ ಕಮಾಲಿಗೆ ಫಿದಾ ಆದ ನೆಟ್ಟಿಗರು!

ಕಾಸರಗೋಡು: ಜಿಲ್ಲೆಯ ಕೂಡ್ಲು ನಿವಾಸಿ ಆಂಗ್ರಿ ಹನುಮಾನ್ ಖ್ಯಾತಿಯ ಗ್ರಾಫಿಕ್ ಡಿಸೈನರ್ ಕರಣ್ ಆಚಾರ್ಯ ಅವರ ಬಾಲಕೃಷ್ಣ ಮತ್ತು ಬಾಲರಾಧೆಯ ಕಲಾಕೃತಿಯೊಂದು ನೆಟ್ಟಿಗರ ಮನ ಸೂರೆಗೊಂಡಿದೆ. ತಮಿಳುನಾಡಿನ ಇನ್ಸ್ಟಾಗ್ರಾಂ ಬಳಕೆದಾರ ನವೀನ್ ಎಂಬವರೊಬ್ಬರು, ಮಕ್ಕಳ ಚಿತ್ರವೊಂದನ್ನು ಹಂಚಿಕೊಂಡಿದ್ದು ಕರಣ್ ಅವರನ್ನು ಟ್ಯಾಗ್ ಮಾಡಿ ಇದನ್ನು ಎಡಿಟ್ ಮಾಡಬಹುದೇ ಎಂದು ಪ್ರಶ್ನಿಸಿದ್ದರು.

Image

ಇದಕ್ಕೆ ಪ್ರತಿಕ್ರಿಯಿಸಿರುವ ಕರಣ್ ಆಚಾರ್ಯ ಆ ಇಬ್ಬರು ಮಕ್ಕಳ ಚಿತ್ರವನ್ನು ಬಾಲರಾಧೆ ಮತ್ತು ಬಾಲಕೃಷ್ಣ ರೀತಿ ಎಡಿಟ್ ಮಾಡಿ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಕರಣ್ ಆಚಾರ್ಯ ಪ್ರತಿಭೆಯನ್ನು ಕೊಂಡಾಡುತ್ತಿರುವ ನೆಟ್ಟಿಗರು ತಮ್ಮ ಮಕ್ಕಳ ಚಿತ್ರವನ್ನೂ ಹಂಚಿಕೊಂಡು ಎಡಿಟ್ ಮಾಡಿ ಕೊಡುವಂತೆ ದಂಬಾಲು ಬಿದ್ದಿದ್ದಾರೆ.

Image

ಕಾಸರಗೋಡಿನ ಪ್ರತಿಭೆ ಕರಣ್ ಆಚಾರ್ಯರವರಿಗೆ ರಾಜಾ ರವಿ ವರ್ಮಾ ಅವರೆ ಸ್ಪೂರ್ತಿ.

Image Credits: Karan Acharya/Twitter