ಕಾಪು: ವ್ಯಕ್ತಿ ನಾಪತ್ತೆ

ಉಡುಪಿ: ಮಾರ್ಚ್ 22 ರಂದು ಮಣಿಪಾಲದ ಆಸ್ಪತ್ರೆಗೆ ರಕ್ತ ಪರೀಕ್ಷೆಗೆಂದು ತೆರಳಿದ ಕಾಪು ತಾಲೂಕು ಮಲ್ಲಾರು ಗ್ರಾಮದ ಕೊಂಬುಗುಡ್ಡೆ ನಿವಾಸಿ ಪವಾಜ್ ಅಹಮ್ಮದ್ (37) ಎಂಬ ವ್ಯಕ್ತಿಯು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 6 ಇಂಚು ಎತ್ತರ, ಬಿಳಿ ಮೈಬಣ್ಣ, ದುಂಡನೆಯ ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್, ಉರ್ದು, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಮೊ.ನಂ: 9480805449, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಉಡುಪಿ ದೂ.ಸಂಖ್ಯೆ: 0820-2520333, ಮೊ.ನಂ: 9480805431 ಅನ್ನು ಸಂಪರ್ಕಿಸುವಂತೆ ಕಾಪು ಪೋಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.