ಕಾಪು ಅಂಚೆ ಪ್ರಗತಿ ಪರಿಶೀಲನ ಕಾರ್ಯಗಾರ.

ಉಡುಪಿ ವಿಭಾಗದ ಕಾಪು ತಾಲೂಕಿನ ಎಲ್ಲಾ ಅಂಚೆ ಕಚೇರಿಯ ಪ್ರಗತಿ ಪರಿಶೀಲನ ಕಾರ್ಯಗಾರವು ಕಾಪು ಅಂಚೆ ಅಂಚೆ ಕಚೇರಿಯಲ್ಲಿ ನಡೆಯಿತು.ಕಾರ್ಯಗಾರದ ನೇತೃತ್ವವನ್ನು ಉಡುಪಿ ವಿಭಾಗದ ಪ್ರಭಾ ರ ಅಧೀಕ್ಷಕರಾದ ಶ್ರೀನಾಥ್ ಇವರು ವಹಿಸಿ ಮಾಹಿತಿ ನೀಡಿದರು.ಕೇಂದ್ರ ಸರ್ಕಾರದ ಅಂಚೆ ಇಲಾಖೆಯನ್ನು ಎಸ್. ಬಿ, ಆರ್. ಡಿ, ಟಿ. ಡಿ ಅದಲ್ಲದೆ ಹೆಚ್ಚಿನ ಬೋನಸ್ ನೀಡುವ ಅಂಚೆ ವಿಮೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಹೆಚ್ಚಿನ ಖಾತೆ ಮಾಡಿ ಸಾರ್ವಜನಿಕರಿಗೆ ಇದರ ಪ್ರಯೋಜನ ಆಗುವಂತೆ ಎಲ್ಲ ಸಿಬ್ಬಂದಿಗಳು ಪ್ರಯತ್ನಿಸಬೇಕು.ಇದರ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಬೇಕೆಂದರು.ಮಾಹಿತಿ ಕಾರ್ಯಗಾರದ ಅಧ್ಯಕ್ಷತೆಯನ್ನು ದಕ್ಷಿಣ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ರಾದ ಸಿ.ಪಿ ಹರೀಶ್ ವಹಿಸಿದರು. ಕಾಪು ಅಂಚೆಪಾಲಕಿ ಯಶೋಧ ಉಪಸ್ಥಿತರಿದ್ದರು. ಅಂಚೆ ಮೇಲ್ವಿಚಾರಕರಾದ ರವಿ ಕಡೇಕಾರ್ ಸ್ವಾಗತಿಸಿ ಧನ್ಯವಾದ ವಿತ್ತರು.