ಕಾಪು: ಇದೇ ಡಿ. 27ರಂದು ನಡೆಯುವ ಕಾಪು ಪುರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಪುರಸಭಾ ವಾರ್ಡ್ ಹಾಗೂ ಅಭ್ಯರ್ಥಿಗಳ ಹೆಸರು ಈ ಕೆಳಕಂಡಂತಿದೆ:
ಕೈಪುಂಜಾಲು (ಹಿಂದುಳಿದ ವರ್ಗ ಅ ಮಹಿಳೆ) – ಪೂರ್ಣಿಮಾ ಚಂದ್ರಶೇಖರ್, ಕೋತಲಕಟ್ಟೆ (ಹಿಂದುಳಿದ ವರ್ಗ ಬಿ ಮಹಿಳೆ) – ರಮಾ ವೈ. ಶೆಟ್ಟಿ , ಕರಾವಳಿ (ಹಿಂದುಳಿದ ವರ್ಗ ಬಿ) – ಕಿರಣ್ ಆಳ್ವ , ಪೊಲಿಪು ಗುಡ್ಡೆ (ಸಾಮಾನ್ಯ) – ರತ್ನಾಕರ ಶೆಟ್ಟಿ , ದಂಡತೀರ್ಥ (ಹಿಂದುಳಿದ ವರ್ಗ ಅ) – ಸುರೇಶ್ ದೇವಾಡಿಗ, ಕಲ್ಯಾ (ಸಾಮಾನ್ಯ ಮಹಿಳೆ) – ಲತಾ ವಿ. ದೇವಾಡಿಗ, ಭಾರತ್ ನಗರ (ಸಾಮಾನ್ಯ) – ಅರುಣ್ ಶೆಟ್ಟಿ, ಬೀಡು ಬದಿ (ಸಾಮಾನ್ಯ) – ಅನಿಲ್ ಕುಮಾರ್, ಪೊಲಿಪು (ಹಿಂದುಳಿದ ವರ್ಗ ಅ ಮಹಿಳೆ) – ಯಶೋಧಾ ಎಸ್. ಕುಂದರ್.
ಕಾಪು ಪೇಟೆ (ಸಾಮಾನ್ಯ ಮಹಿಳೆ) – ಸರಿತಾ ಪೂಜಾರಿ, ಲೈಟ್ ಹೌಸ್ (ಹಿಂದುಳಿದ ವರ್ಗ ಅ) – ನಿತಿನ್ ಕುಮಾರ್, ಕೊಪ್ಪಲಂಗಡಿ (ಪರಿಶಿಷ್ಟ ಪಂಗಡ) – ನಾಗೇಶ್, ತೊಟ್ಟಂ (ಪರಿಶಿಷ್ಟ ಜಾತಿ) – ಸುಭಾಷಿಣಿ, ದುಗ್ಗನ್‌ತೋಟ (ಸಾಮಾನ್ಯ) – ಸುರೇಶ್ ಡಿ.ಪಿ., ಮಂಗಳಪೇಟೆ (ಸಾಮಾನ್ಯ ಮಹಿಳೆ) – ಸುಮನ, ಜನಾರ್ದನ ದೇವಸ್ಥಾನ (ಹಿಂದುಳಿದ ವರ್ಗ ಅ ಮಹಿಳೆ) – ಹರಿಣಿ ದೇವಾಡಿಗ, ಬಡಗರಗುತ್ತು (ಸಾಮಾನ್ಯ ಮಹಿಳೆ) – ಗೌರಿ ಶಂಕರ್ ಜತ್ತನ್, ಕೊಂಬಗುಡ್ಡೆ (ಹಿಂದುಳಿದ ವರ್ಗ ಅ) – ನಜೀರ್ ಶೇಖ್, ಜನರಲ್ ಶಾಲೆ (ಸಾಮಾನ್ಯ ಮಹಿಳೆ) – ಮೋಹಿನಿ ಶೆಟ್ಟಿ, ಗುಜ್ಜಿ (ಪರಿಶಿಷ್ಟ ಜಾತಿ ಮಹಿಳೆ) – ಶೀಲಾ ಅಶೋಕ್, ಗರಡಿ (ಸಾಮಾನ್ಯ) – ಶೈಲೇಶ್ ಅಮೀನ್, ಕುಡ್ತಿಮಾರ್ (ಸಾಮಾನ್ಯ ಮಹಿಳೆ) -ಸುಮತಿ ಐತಪ್ಪ , ಅಹಮ್ಮದಿ ಮೊಹಲ್ಲಾ (ಸಾಮಾನ್ಯ) – ಬಿ. ಹೈದರ್ ಅವರನ್ನು ಆಯ್ಕೆ ಮಾಡಿ ಘೋಷಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಚುನಾವಣಾ ಸಹ ಪ್ರಭಾರಿ ಕಿರಣ್ ಕೊಡ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಕಲ್ಮಾಡಿ, ಪುರಸಭೆ ವ್ಯಾಪ್ತಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂದೀಪ್ ಶೆಟ್ಟಿ, ಗಂಗಾಧರ ಸುವರ್ಣ, ಅನಿಲ್ ಶೆಟ್ಟಿ ಮಾಂಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.