ಉಡುಪಿ: ಮೂಳೂರು ಗ್ರಾಮದ ಮಹಿಳೆ ಶಮೀನಾ (24) ಮತ್ತು ಆಕೆಯ ನಾಲ್ಕುವರೆ ವರ್ಷದ ಮೊಹಮ್ಮದ್ ಶಾನ್ (4.5) ಆಗಸ್ಟ್ 31ರಂದು ಗಂಡನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಶಮೀನಾ 5 ಅಡಿ ಎತ್ತರ, ಬಿಳಿ ಮೈ ಬಣ್ಣ, ದುಂಡು ಮುಖ, ಹಳದಿ ಹಾಗೂ ಬಿಳಿ ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ ಬುರ್ಖಾ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲೀಷ್ ಹಾಗೂ ಬ್ಯಾರಿ ಭಾಷೆ ಮಾತನಾಡುತ್ತಾರೆ. ಮೊಹಮ್ಮದ್ ಶಾನ್ ಗೋದಿ ಮೈಬಣ್ಣ, ದುಂಡು ಮುಖ, ಕಪ್ಪು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಬ್ಯಾರಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂ: 0820-2551033, ಮೊ.ನಂ: 9480805449, 9480805466 ಅಥವಾ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಉಡುಪಿ ದೂ.ಸಂ: 0820-252033, ಮೊ.ನಂ: 9480805431ನ್ನು ತಿಳಿಸುವಂತೆ ಕಾಪು ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.