ಕಾಪು: ‘ನಿಸರ್ಗ ಫ್ರೆಶ್’ ಕೋಲ್ಡ್ ಪ್ರೆಸ್ಟ್‌ ಆಯಿಲ್ & ಮಿಲ್ ಫ್ಯಾಕ್ಟರಿ ಔಟ್ಲೆಟ್ 4ನೇ ಮಳಿಗೆ ಅದ್ದೂರಿ ಉದ್ಘಾಟನೆ

ಉಡುಪಿ: ನೈಜ ದರದಲ್ಲಿ ಪರಿಶುದ್ಧಮರದಗಾಣದ ಅಡುಗೆ ಎಣ್ಣೆಗಳ ಉತ್ಪಾದನೆ ಮತ್ತು ಮಾರಾಟ ಮಾಡುವ ಮೂಲಕ ಜನಮೆಚ್ಚುಗೆ ಗಳಿಸಿರುವ “ನಿಸರ್ಗ ಫ್ರೆಶ್’ ಕೋಲ್ಡ್ ಪ್ರೆಸ್ಟ್ ಆಯಿಲ್ ಆ್ಯಂಡ್ ಮಿಲ್ ಫ್ಯಾಕ್ಟರಿ ಔಟ್ಲೆಟ್ ನೂತನ 4ನೇ ಮಳಿಗೆಯು ಕಾಪು ದಂಡತೀರ್ಥ ಶಾಲೆಯ ಬಳಿಯ ಪ್ರೆಸ್ಟೀಜ್ ಬಿಲ್ಡಿಂಗ್‌ನಲ್ಲಿ ಜು.12ರಂದು ಆರಂಭಗೊಂಡಿತು.

ಕಾಪು ಶ್ರೀ ಹಳೇ ಮಾರಿಗುಡಿ ದೇಗುಲದ ಮಾಜಿ ಆಡಳಿತ ಟ್ರಸ್ಟಿ ಕೆ.ಶ್ರೀಧರ ಶೆಣೈ ಅವರು ಉದ್ಘಾಟಿಸಿ, ಉತ್ತಮ ಗುಣಮಟ್ಟ ಮತ್ತು ಆರೋಗ್ಯದಾಯಕ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರ ಮನಗೆದ್ದ ‘ನಿಸರ್ಗ ಫ್ರೆಶ್’ ಸಂಸ್ಥೆಯು ಕಾಪು ಪರಿಸರದಲ್ಲಿ ಸೇವೆ ನೀಡಲಿರುವುದು ಶ್ಲಾಘನೀಯ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ಸೂರಿ ಶೆಟ್ಟಿ ಕಾಪು,ಕಾಪು ಪುರಸಭೆ ಮಾಜಿ ಅಧ್ಯಕ್ಷರಾದ ಅನಿಲ್ ಕುಮಾರ್, ಉದ್ಯಮಿಗಳಾದ ರಘುನಾಥ್ ಮಾಬಿಯಾನ್, ರಾಮಚಂದ್ರ ಮಾಬಿಯಾನ್, ಯೋಗೀಶ್ ಸುವರ್ಣ ಶುಭ ಹಾರೈಸಿದರು.

ನಿಸರ್ಗ ಫ್ರೆಶ್’ನಲ್ಲಿ 30ಕ್ಕೂ ಅಧಿಕ ಉತ್ಪನ್ನಗಳು ಲಭ್ಯ:

ಅಂಬಲಪಾಡಿ, ಉಡುಪಿ ನಗರ, ಮಂಗಳೂರು ಬಳಿಕ ಇದೀಗ 4ನೇ ಮಳಿಗೆಯನ್ನು ಕಾಪುವಿನಲ್ಲಿ ತೆರೆಯಲಾಗಿದ್ದು, ನೂತನ ಮಳಿಗೆಯಲ್ಲಿ ಮರದ ಗಾಣದಲ್ಲಿ ತಯಾರಿಸಲ್ಪಡುವ ತೆಂಗಿನ ಎಣ್ಣೆ ಎಳ್ಳೆಣ್ಣೆ ಶೇಂಗಾ, ಕುಸುಬಿ, ಅಗಸೆ ಬೀಜ, ಹುಚ್ಚೆಳ್ಳು ಸಹಿತ ವಿವಿಧ ಬಗೆಯ ಎಣ್ಣೆಗಳು, ಸಂಬಾರ ಪದಾರ್ಥಗಳ ಸಹಿತ ಅಡುಗೆಗೆ ಬಳಸುವ 30ಕ್ಕೂ ಅಧಿಕ ಉತ್ಪನ್ನಗಳು ಇಲ್ಲಿ ಲಭ್ಯ ಎಂದು ಮಾಲಕ ಪುನೀತ್ ಪೂಜಾರಿ, ದೀಪಾ ಪುನೀತ್ ದಂಪತಿ ತಿಳಿಸಿದರು.

ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಉದ್ಯಮಿ ಶ್ರೀಧರ ಶೇಣವ ಕಾಪು, ವನಜಾ ಬೊಲ್ಲು ಪೂಜಾರ್ತಿ ಮಟ್ಟು ಮಹೇಶ್ ಅಮೀನ್, ಮಹಮ್ಮದ್ ಶಕೀಲ್, ಉಮೇಶ್ ಕುಂದರ್, ರಾಕೇಶ್ ಪೂಜಾರಿ, ದಿನೇಶ್ ಕುಲಾಲ್, ನಾರಾಯಣ ಪೂಜಾರಿ ತೌಡಬೆಟ್ಟು ರಮೇಶ್ ಕುಂದರ್ ಉಪಸ್ಥಿತರಿದ್ದರು. ಅಶ್ವತ್ ಪೂಜಾರಿ ಕಟಪಾಡಿ ಸ್ವಾಗತಿಸಿ, ನಿರೂಪಿಸಿದರು.