ಮತ್ತೆ ಶುರುವಾಯ್ತು ಕಾಂತಾರ ಫೀವರ್ : ಕಾಂತಾರ ಚಾಪ್ಟರ್ 1 ಟ್ರೈಲರ್ ಅಬ್ಬರಕ್ಕೆ ಪ್ರೇಕ್ಷಕರು ಫುಲ್ ಖುಷ್

ಕೊನೆಗೂ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನ ಅದ್ದೂರಿತನಕ್ಕೆ ಪ್ರೇಕ್ಷಕರು ಖುಷ್ ಆಗಿದ್ದಾರೆ. ಚಿತ್ರದ ಟ್ರೈಲರ್  ಹೊಸ ಲೋಕವೊಂದಕ್ಕೆ ಕರೆದೊಯ್ಯುವಂತಿದ್ದು ಕಾಡಿನ ರೋಮಾಂಚಕ ಸನ್ನಿವೇಶ, ನಾಯಕನ ಪರಾಕ್ರಮ, ಜನರ ವ್ಯಾಪಾರ, ಜೀವನ, ರಾಜನ ಆಳ್ವಿಕೆ, ದಬ್ಬಾಳಿಕೆ ಎಲ್ಲವೂ ಟ್ರೈಲರ್ ನಲ್ಲಿ ಸೊಗಸಾಗಿ ಮೂಡಿಬಂದಿದೆ. ಹೊಂಬಾಳೆ ಫಿಲ್ಮ್​ ನಿರ್ಮಿಸಿದ ರಿಷಬ್ ಶೆಟ್ಟಿ  ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದ ಪ್ರೀಕ್ವೆಲ್ ಇದಾಗಿದೆ. ಕಳೆದ ಕೆಲವು ಸಮಯಗಳಿಂದ ಈ ಚಿತ್ರದ ಕುರಿತು ಭಾರೀ ನಿರೀಕ್ಷೆ, ಹೈಪ್ ನೀಡುವ ಮಾತುಗಳು ಕೇಳಿಬರುತ್ತಿತ್ತು. ಇದೀಗ ಟ್ರೈಲರ್ ನಿರೀಕ್ಷೆಗಳನ್ನುಇನ್ನಷ್ಟು ಜಾಸ್ತಿ ಮಾಡಿದೆ.

ಅಂದ ಹಾಗೆಟ್ರೈಲರ್ ನಲ್ಲಿರಿಷಬ್ ಶೆಟ್ಟಿ ಮತ್ತೊಮ್ಮೆ ಮಿಂಚಿನಂತೆ ಮೊಳಗಿದ್ದಾರೆ. ದೈವಿಕತೆ, ಭಯ  ಗೌರವ ಮೂಡಿಸುವಂತಹ ಪಾತ್ರದಲ್ಲಿ ಅವರು ಅಬ್ಬರಿಸಿದ್ದಾರೆ. ನಟಿ ರುಕ್ಮಿಣಿ ವಸಂತ್ ಇಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ರಿಷಬ್ ಶೆಟ್ಟಿ ಅವರು ಕಾಡಿನಲ್ಲಿ ಬದುಕುವ ಜನರ ಸಮೂಹವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.ಬಾಲಿವುಡ್ ನಟ ಇಲ್ಲಿ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಕಾಡು, ಕಾಡಿನ ಜನರು, ಅವರ ನಂಬಿಕೆ, ಆಚರಣೆ, ಜೀವನದ ಹೋರಾಟ ಎಲ್ಲವನ್ನೂ ಕಾಂತಾರ ಚಾಪ್ಟರ್ 1ನಲ್ಲಿ ನೋಡಬಹುದು  ಕಲ್ಲು, ಕಾರಣಿಕ, ಮಿಂಚಿನಂತ ಹಿನ್ನೆಲೆ, ಗುಡುಗುವಂತಹ ದೃಶ್ಯಗಳು ಟ್ರೈಲರ್ ನಲ್ಲಿದೆ. ಅಕ್ಟೋಬರ್-2 ರಂದು  ಬಹುಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದ್ದು ಪ್ರೇಕ್ಷಕರು ಆ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ.