ಬಂದಳು ನೋಡಿ ಮಹಾರಾಣಿ ಕನಕವತಿ “ಕಾಂತಾರ ಚಾಪ್ಟರ್1”ನ ನಾಯಕಿಯ ಫಸ್ಟ್ ಲುಕ್ ನೋಡಿ ಮೋಹಿತರಾದ ಪ್ರೇಕ್ಷಕರು!

ಇಷ್ಟು ದಿನ ರುಕ್ಮಿಣಿ ವಸಂತ್ ನಾಯಕಿಯಂತೆ, ಎನ್ನುವ ಗಾಳಿ ಸುದ್ದಿ ಈ ಮೂಲಕ ನಿಜವಾಗಿದೆ, ಅಂದ್ರೆ  ರುಕ್ಮಿಣಿ ವಸಂತ್ ಅವರೇ ನಾಯಕಿ ಎನ್ನುವುದು ಈಗ ಫೈನಲ್ ಆಗಿದೆ.

“ಕಾಂತಾರ ಚಾಪ್ಟರ್ 1” ಚಿತ್ರದಲ್ಲಿ ರುಕ್ಮಿಣಿ ವಸಂತ್, ಮಹಾರಾಣಿಯ ಪಾತ್ರವನ್ನು ನಿರ್ವಹಿಸಿದ್ದು ಇದೀಗ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ನಲ್ಲಿ  ಮಹಾರಾಣಿಯ ರೂಪದಲ್ಲಿಯೇ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಕನಕವತಿ ಹೆಸರಿನ ಪಾತ್ರವನ್ನು ರುಕ್ಮಿಣಿ ವಸಂತ್  ನಿರ್ವಹಿಸಿದ್ದು   “ನಮ್ಮ ಚಿತ್ರದ ಕನಕವತಿಯನ್ನ ನಿಮ್ಮ ಮುಂದೆ ಪರಿಚಯಿಸುತ್ತಿದ್ದೇವೆ” ಅಂತಲೇ ಹೊಂಬಾಳೆ ಸಂಸ್ಥೆ ಫಸ್ಟ್ ಲುಕ್  ರಿಲೀಸ್ ಮಾಡಿದೆ. ರುಕ್ಮಿಣಿ ವಸಂತ್ “ಸಪ್ತಸಾಗರದಾಚೆಯೆಲ್ಲೋ”ಎನ್ನುವ ಚಿತ್ರದಲ್ಲಿ ಇತ್ತೀಚೆಗೆ ನಟಿಸಿ ಮಿಂಚಿದ್ದರು. ಇದೀಗ ಕಾಂತಾರ ಚಾಪ್ಟರ್ 1 ನ ನಾಯಕಿಯಾಗಿ ಅದೂ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ಮಾಡಿರುವ ವಿಡಿಯೋ ಮತ್ತು ಪೋಸ್ಟರ್ ನಲ್ಲಿ ರುಕ್ಮಿಣಿ ವಸಂತ್ ಅವರ ರಾಣಿಯ ಲುಕ್ ಗೆ ಚೆಂದಕ್ಕೆ ಪ್ರೇಕ್ಷಕರು ಮೋಹಿತರಾಗಿದ್ದಾರೆ.