ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..!
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..
ಧನ್ಯವಾದ ಕರ್ನಾಟಕ..
ಈ ರೀತಿಯಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮಧ್ಯೆ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ತಮಿಳು ಚಿತ್ರರಂಗದ ದಿಗ್ಗಜ ತಲೈವಾ ರಜನಿಕಾಂತ್ ಕೂಡಾ ಕಾಂತಾರ ಕಂಡು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವ್ಯಕ್ತವಾಗಿರುವುದಕ್ಕಿಂತ ಅವ್ಯಕ್ತವಾಗಿರುವುದೇ ಹೆಚ್ಚಿದೆ. ಹೊಂಬಾಳೆ ಫಿಲಮ್ಸ್ ಗಿಂತ ಚೆನ್ನಾಗಿ ಇದನ್ನು ಯಾರೂ ಹೇಳಲಾಗುತ್ತಿರಲಿಲ್ಲ. ನೀವು ನನಗೆ ರೋಮಾಂಚನವನ್ನುಂಟು ಮಾಡಿದ್ದೀರಿ. ಒಬ್ಬ ಬರಹಗಾರ, ನಿರ್ದೇಶಕ ಮತ್ತು ನಟನಾಗಿ ರಿಷಬ್ ನಿಮಗೆ ಹ್ಯಾಟ್ಸ್ ಆಫ್. ಈ ಮಾಸ್ಟರ್ ಪೀಸ್ ಭಾರತೀಯ ಚಿತ್ರ ಸಮಸ್ತ ತಂಡಕ್ಕೆ ಅಭಿನಂದನೆಗಳು ಎಂದು ತಲೈವಾ ಟ್ವೀಟ್ ಮಾಡಿದ್ದಾರೆ.
ಕಾಂತಾರ ಚಿತ್ರವು ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ₹200 ಕೋಟಿ ರೂ ಗಳಿಸಿದೆ ಮತ್ತು ಕರ್ನಾಟಕ ರಾಜ್ಯದಲ್ಲಿ ಕೆಜಿಎಫ್: ಅಧ್ಯಾಯ 2 ರ ದಾಖಲೆಯನ್ನು ಕೂಡಾ ಇದು ಮುರಿದಿದೆ. ಕನ್ನಡದಲ್ಲಿ ಈ ಸಾಧನೆ ಮಾಡಿದ ಮೂರನೇ ಚಿತ್ರ ಕಾಂತಾರ.
ಟ್ರೇಡ್ ಟ್ರ್ಯಾಕರ್ ಸ್ಯಾಕ್ ನಿಲ್ಕ್ ಪ್ರಕಾರ, ಅಕ್ಟೋಬರ್ 24 ರ ವೇಳೆಗೆ, ಕಾಂತಾರ ವಿಶ್ವಾದ್ಯಂತ ರೂ211.5 ಕೋಟಿ ಗಳಿಸಿದೆ. ಇದರಲ್ಲಿ ಭಾರತವೊಂದರಿಂದಲೇ ರೂ196.95 ಕೋಟಿ ಗಳಿಕೆ ಸೇರಿದೆ. ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯು ಬಿಡುಗಡೆಯಾದ ಕೇವಲ ಹತ್ತು ದಿನಗಳಲ್ಲಿ ರೂ 24 ಕೋಟಿ ಮತ್ತು ತೆಲುಗು ರೂ 23 ಕೋಟಿ ಗಳಿಸಿದೆ. ಈ ಅಂಕಿ ಅಂಶದೊಂದಿಗೆ, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರಗಳ ಪಟ್ಟಿಯಲ್ಲಿ ಇದೀಗ ಕೆಜಿಎಫ್: ಅಧ್ಯಾಯ 2 (ರೂ1207 ಕೋಟಿ) ಮತ್ತು ಕೆಜಿಎಫ್: ಅಧ್ಯಾಯ 1 (ರೂ250 ಕೋಟಿ) ಕ್ಕಿಂತ ಸ್ವಲವೇ ಹಿಂದೆ ಇದೆ. ಕಾಂತಾರ ಓಡುತ್ತಿರುವ ಓಟ ನೋಡುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಕೆಜಿಎಫ್: ಅಧ್ಯಾಯ 1 ರ ದಾಖಲೆಯನ್ನು ಪುಡಿಗಟ್ಟಲಿದೆ ಎಂದು ಅನುಮಾನಿಸಲಾಗಿದೆ.
ಅಕ್ಟೋಬರ್ 24 ರ ಹೊತ್ತಿಗೆ, ಕಾಂತಾರವು ಕರ್ನಾಟಕವೊಂದರಲ್ಲೇ 77 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿದೆ. ಕೆಜಿಎಫ್ 2 ಮತ್ತು ಕೆಜಿಎಫ್ 1 75 ಲಕ್ಷ ಮತ್ತು 72 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿದೆ.