ಕೆಲವೆ ಕೆಲವು ದಿನಗಳಲ್ಲಿ ಅತೀ ಹೆಚ್ಚು ಪ್ರೇಕ್ಷಕರ ಮನಗೆಲ್ಲುವ ಮೂಲಕ ಉಳಿದೆಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನ ಅಲಂಕರಿಸುವ ಮೂಲಕ ಜೊತೆ ಜೊತೆಯಲಿ ದಾಖಲೆ ನಿರ್ಮಿಸಿದೆ.
ಧಾರಾವಾಹಿ ಪ್ರಪಂಚಕ್ಕೆ ರೀ ಎಂಟ್ರಿ ಕೊಟ್ಟ ವಿಷ್ಣು ದಾದನ ಅಳಿಯ ಅನಿರುದ್ಧ ಧಾರಾವಾಹಿ ಹೀರೋ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ ಅಭಿನಯ, ಲುಕ್ ಮತ್ತು ಸ್ಟೈಲ್ ಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಧಾರಾವಾಹಿಯ ಪ್ರತಿಯೊಂದು ಪಾತ್ರವು ಪ್ರೇಕ್ಷಕರ ಮನಗೆದ್ದಿದೆ. ಪ್ರೇಕ್ಷಕರು ತಂಬ ಇಷ್ಟಪಟ್ಟಿರುವ ಜೊತೆ ಜೊತೆಯಲಿ ಎಲ್ಲಾ ಸಿರಿಯಲ್ ಗಳನ್ನು ಹಿಂದಿಕ್ಕಿ ನಂ.1 ಸ್ಥಾನವನ್ನೆ ಕಾಪಾಡಿಕೊಂಡಿರುವುದು ವಿಶೇಷ.
ಧಾರಾವಾಹಿ ಪ್ರಾರಂಭವಾದಗಿನಿಂದನೂ ಭರ್ಜರಿಯಾಗಿ ಸದ್ದು ಮಾಡುತ್ತಿರುವ ಜೊತೆ ಜೊತೆಯಲಿ ಮೊದಲ ವಾರದಲ್ಲೆ ನಂ.1 ಸ್ಥಾನಕ್ಕೆ ಏರಿತ್ತು. ಮೊದಲ ವಾರದಲ್ಲೇನೊ ಟಾಪ್ ನಲ್ಲಿ ಮೆರೆದ ಧಾರಾವಾಹಿ ಎರಡನೇ ವಾರದ ಕಥೆ ಏನಾಗಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೆ ಎರಡನೇ ವಾರದಲ್ಲೂ ನಂ.1 ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದೆ ಧಾರಾವಾಹಿ ತಂಡ.