ಬೆಂಗಳೂರು: ಜಾಗತಿಕ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ನಿರಂತರವಾಗಿ ಕನ್ನಡ ಮತ್ತು ಕನ್ನಡಿಗರಿಗೆ ಅಗೌರವ ತೋರುತ್ತಿರುವುದರಿಂದ ಅವರ ಚಲನಚಿತ್ರಗಳನ್ನು ಕರ್ನಾಟಕದಿಂದ ಶಾಶ್ವತವಾಗಿ ನಿಷೇಧಿಸಲು ಕನ್ನಡ ಸಂಘಟನೆಗಳು ಮುಂದಾಗಿವೆ. ಕನ್ನಡ ಸಂಘಟನೆಗಳು, ಥಿಯೇಟರ್ ಮಾಲೀಕರು ಮತ್ತು ಕನ್ನಡ ಚಿತ್ರ ಮಂಡಳಿಯ ನಡುವೆ ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಬಾಕ್ಸ್ ಆಫೀಸ್ ಸೌತ್ ಇಂಡಿಯನ್ ಟ್ವೀಟ್ ಮಾಡಿದೆ.
ಇದು ಇದೇ ರೀತಿ ಮುಂದುವರಿದಲ್ಲಿ ಪುಷ್ಪ2 ಕರ್ನಾಟಕದ ಯಾವುದೇ ಭಾಗದಲ್ಲಿ ಬಿಡುಗಡೆಯಾಗುವುದಿಲ್ಲ. ಇದರಿಂದ ನಿರ್ಮಾಪಕರಿಗೆ ಮತ್ತು ಕರ್ನಾಟಕದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭಾರಿ ನಷ್ಟವಾಗಲಿದೆ. ಕನ್ನಡಿಗರ ಬಗ್ಗೆ ರಶ್ಮಿಕಾ ಅವರ ಅಗೌರವದ ವರ್ತನೆಗಳಿಂದ ಈ ದಿನಗಳಲ್ಲಿ ರಶ್ಮಿಕಾ ಅವರನ್ನು ಆಯ್ಕೆ ಮಾಡಲು ನಿರ್ಮಾಪಕರು ಹೆದರುತ್ತಿದ್ದಾರೆ ಎಂದು ಬಾಕ್ಸ್ ಆಫೀಸ್ ಸೌತ್ ಇಂಡಿಯನ್ ಟ್ವೀಟ್ ಮಾಡಿದೆ. ಆದಾಗ್ಯೂ, ಈ ಬಗ್ಗೆ ಅಧಿಕೃತವಾದ ಮಾಹಿತಿ ಕನ್ನಡ ಚಿತ್ರರಂಗದಿಂದಾಗಲೀ ಅಥವಾ ಕನ್ನಡ ಸಂಘಟನೆಗಳಿಂದಾಲೀ ಇದುವರೆಗೂ ಬಂದಿಲ್ಲ. ಇದರ ಸತ್ಯಾಸತ್ಯತೆಗಳನ್ನು ಮುಂದಿನ ದಿನಗಳಲ್ಲಿ ಕಾಲವೆ ನಿರ್ಧರಿಸಲಿದೆ ಎಂದಷ್ಟೇ ಹೇಳಬಹುದು.