ಅ.11ರಂದು‌ ರಾಜ್ಯಾದ್ಯಂತ 80 ಚಿತ್ರಮಂದಿರಗಳಲ್ಲಿ “ಲುಂಗಿ” ಚಿತ್ರ ಬಿಡುಗಡೆ

ಮಂಗಳೂರು: ತುಳು ಬಾಷೆಯಲ್ಲಿ ಎರಡು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಮುಖೇಶ್ ಹೆಗ್ಡೆಯವರು ಖಾರ ಎಂಟಟೇರ್ನ್ಮೆಂಟ್ ಬ್ಯಾನರಿ‌ನಡಿಯಲ್ಲಿ ನಿರ್ಮಿಸಿರುವ ಕನ್ನಡ ಸಿನೆಮಾ ಲುಂಗಿ ಚಿತ್ರ ಅಕ್ಟೋಬರ್ 11ರಂದು ಜಯಣ್ಣ ಕಂಬೈನ್ಸ್ ಮೂಲಕ ರಾಜ್ಯಾದ್ಯಂತ ರಾಜ್ಯಾದ್ಯಂತ 80 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮುಖೇಶ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಗೋಷ್ಠಿಯಲ್ಲಿ ಮಾತನಾಡಿ, ಉಡುಪಿಯಲ್ಲಿ ಅಲಂಕಾರ್, ಮಣಿಪಾಲ ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ ಮತ್ತು ಕುಂದಾಪುರದಲ್ಲಿ ವಿನಾಯಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಲುಂಗಿ ಚಿತ್ರದ ತೆಲುಗು ರಿಮೇಕ್ ರೈಟ್ಸ್ ಈಗಾಗಲೇ ಒಂದೊಳ್ಳೆಯ ಮೊತ್ತಕ್ಕೆ ಖರೀದಿಯಾಗಿದ್ದು ಡಿಜಿಟಲ್ ಫ್ಲ್ಯಾಟ್ ಫಾರ್ಮ್ ನಿಂದಲೂ ಆಫರ್ ಬಂದಿವೆ ಎಂದು ಹೇಳಿದರು.
ಚಿತ್ರದ ನಾಯಕ ನಟ ಪ್ರಣವ್ ಹೆಗ್ಡೆ ಮಾತನಾಡಿ, ಇದು ನನಗೆ ಮೊದಲ ಚಿತ್ರ, ಲುಂಗಿ ಸಿನಿಮಾ ಮಂಗಳೂರು ಭಾಷೆಯಲ್ಲೇ ಮೂಡಿಬಂದಿದೆ. ಕರಾವಳಿ ಸೊಗಡು ಇರುವ ಕಾರಣ ಇಲ್ಲಿನ ಜನರಿಗೆ ಇಷ್ಟವಾಗುತ್ತೆ. ಅಲ್ಲದೇ ‘ಲುಂಗಿ’ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದ ಸಿನಿಮಾ ಅಂತ ಹೇಳಿದರು. ಮಂಗಳೂರು ಭಾಗದವರೇ ಸೇರಿ ಮಾಡಿರುವ ಚಿತ್ರ ಇದಾಗಿದ್ದು, ಅಕ್ಷಿತ್ ಶೆಟ್ಟಿ ಹಾಗೂ ಅರ್ಜುನ್ ಲೆವಿಸ್ ನಿರ್ದೇಶನ ಮಾಡಿದ್ದಾರೆ. ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿದೆ. ಮುಖ್ಯ ಪಾತ್ರದಲ್ಲಿ ಪ್ರಣವ್ ಹೆಗ್ಡೆ, ಅಹಲ್ಯ ಸುರೇಶ್, ರಾಧಿಕಾ ರಾವ್ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ಅನೇಕ ತುಳು ಚಿತ್ರರಂಗದ ಕಲಾವಿದರು ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಸಿನಿಮಾವನ್ನು ಮುಖೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ.