ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ: ಅರ್ಜಿ ಆಹ್ವಾನ

ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರವು ಮಾರ್ಚ್ 10 ರಿಂದ 15 ರ ವರೆಗೆ ಒಟ್ಟು ಆರು ದಿನಗಳ ಕಾಲ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ- 2022” ನ್ನು ಆಯೋಜಿಸಿದೆ.

ಪುಸ್ತಕ ಮೇಳದಲ್ಲಿ ಭಾಗವಹಿಸಲು ಆಸಕ್ತಿ ಇರುವ ಜಿಲ್ಲೆಯ ಎಲ್ಲಾ ಕನ್ನಡ ಪುಸ್ತಕ ಪ್ರಕಾಶಕರು ಹಾಗೂ ಮಾರಾಟಗಾರರು ಮಾರ್ಚ್ 8 ರ ಒಳಗೆ ಅರ್ಜಿ ಸಲ್ಲಿಸಿ, ಮಾರಾಟ ಮಳಿಗೆಯನ್ನು ಕಾಯ್ದಿರಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಕಛೇರಿ ದೂ.ಸಂಖ್ಯೆ: 080-22484516 / 22107704, ಪ್ರಾಧಿಕಾರದ ವೆಬ್‌ಸೈಟ್ www.kannadapustakapradhikara.com ಅಥವಾ ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.