ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ ರಣಾವತ್ ತಮ್ಮ ಮುಂದಿನ ಚಿತ್ರ ‘ಎಮರ್ಜೆನ್ಸಿ’ಯ ಎರಡನೇ ಟೀಸರ್ ಶನಿವಾರದಂದು ಬಿಡುಗಡೆಗೊಳಿಸಿದ್ದಾರೆ. ಕಂಗನಾ ನಿರ್ದೇಶನ, ನಿರ್ಮಾಣ ಮತ್ತು ನಟನೆಯ ಈ ಚಿತ್ರವು 1975 ಜೂನ್ 25 ರಂದು ಹೇರಲಾದ ತುರ್ತುಪರಿಸ್ಥಿತಿಯ ಹಿನ್ನಲೆಯನ್ನು ಒಳಗೊಂಡಿದೆ.
ಚಿತ್ರದ ಟೀಸರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಂಗನಾ, “ರಕ್ಷಕರೋ ಅಥವಾ ಸರ್ವಾಧಿಕಾರಿಯೋ? ನಮ್ಮ ರಾಷ್ಟ್ರದ ನಾಯಕಿ ತನ್ನ ಜನರ ಮೇಲೆ ಯುದ್ಧವನ್ನು ಘೋಷಿಸಿದ ನಮ್ಮ ಇತಿಹಾಸದ ಕರಾಳ ಸಮಯದ ಸಾಕ್ಷಿಯಾಗಿರುವ ಎಮರ್ಜೆನ್ಸಿ ಚಿತ್ರವು ನವೆಂಬರ್ 24 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ” ಎಂದಿದ್ದಾರೆ.
ರಿತೇಶ್ ಶಾ ಅವರ ಚಿತ್ರಕಥೆ ಹೊಂದಿರುವ ಚಿತ್ರದಲ್ಲಿ ನಟ ಅನುಪಮ್ ಖೇರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.