ಅಂತೂ ಇಂತೂ ಶೂಟಿಂಗ್ ಮುಗಿಸಿದ ಕಾಂತಾರ ಚಾಪ್ಟರ್ 1 : ಮೇಕಿಂಗ್ ವಿಡಿಯೋ ನೋಡಿ ಪ್ರೇಕ್ಷಕರು ದಿಲ್ ಖುಷ್

ಈ ವರ್ಷದ ಅದ್ಧೂರಿ ಬಹುನಿರೀಕ್ಷಿತ ಚಿತ್ರ, ರಿಷಬ್ ಶೆಟ್ಟಿ ಅಭಿನಯದ  ಕಾಂತಾರ: ಚಾಪ್ಟರ್ 1’ ಅಂತೂ ಇಂತೂ  ಶೂಟಿಂಗ್ ಪೂರ್ಣಗೊಳಿಸಿದ್ದು  ಹೊಂಬಾಳೆ ಫಿಲ್ಮ್ಸ್ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ  ಚಿತ್ರೀಕರಣದ ಹೈಲೈಟ್  ಇಡಿಯೋ ಪೋಸ್ಟ್ ಮಾಡಿದೆ. ಈ ವಿಡಿಯೋ,  ಸಿನಿಮಾದ ಮೇಕಿಂಗ್ ತೋರಿಸುವ ಪ್ರಯತ್ನ ಮಾಡಿದೆ.  ಕಾಂತಾರ ಚಿತ್ರತಂಡ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ನಡೆಸಿದೆ.  ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದೆ. ಸತತ  3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ: ಚಾಪ್ಟರ್ 1’ ಕೆಲಸದಲ್ಲಿ ತೊಡಗಿಕೊಂಡಿತ್ತು.  ಸಾವಿರಾರು ಸಿಬ್ಬಂದಿಗಳು ಈ ಚಿತ್ರಕ್ಕೋಸ್ಕರ ಶ್ರಮಿಸಿದ್ದಾರೆ. ಇದೀಗ ಮೇಕಿಂಗ್ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ಲ್ ಆಗಿದ್ದಾರೆ.

ಅರವಿಂದ್ ಕಶ್ಯಪ್ ಛಾಯಾಗ್ರಾಹಣ, ವಿನೇಶ್ ಬಂಗ್ಲನ್ ಪ್ರೊಡಕ್ಷನ್ ಡಿಸೈನ್ ಚಿತ್ರಕ್ಕೆ ಇದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಕಾಂತಾರ: ಚಾಪ್ಟರ್ 1’  ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಇದೀಗ  ಮೇಕಿಂಗ್ ವಿಡಿಯೋ ನೋಡಿದ ನಂತರವಂತೂ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಜಾಸ್ತಿಯಾಗಿದೆ.