ಚಿಕ್ಕಮಗಳೂರು: ಕಂಬಳದ ಮಿಜಾರು ಶ್ರೀನಿವಾಸ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಗೋಪಾಲಕೃಷ್ಣ ಪ್ರಭು ಸೇರಿದಂತೆ ಒಟ್ಟು ಹತ್ತು ಮಂದಿ ಸಾಧಕರು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಿಜಾರು ಶ್ರೀನಿವಾಸಗೌಡ (ಕಂಬಳ), ದಕ್ಷಿಣ ಕನ್ನಡ ಜಿಲ್ಲೆಯ ಗೋಪಾಲಕೃಷ್ಣ ಪ್ರಭು (ಕಂಬಳ), ಬೆಂಗಳೂರಿನ ಎಂ. ರಂಜಿತ್ (ಥ್ರೋಬಾಲ್), ಮಣಿಕಂದನ್ (ಪ್ಯಾರಾ ಕ್ಲೈಬಿಂಗ್),ಮೈಸೂರು ಜಿಲ್ಲೆಯ ಕುರುಬೂರಿನ ವೀಣಾ (ಕೊಕ್ಕೊ), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಎಸ್.ಕೌಸಲ್ಯಾ (ಕಬಡ್ಡಿ), ದಕ್ಷಿಣ ಕನ್ನಡ ಜಿಲ್ಲೆ ಗಾಣದ ಕೊಟ್ಯಾಮನೆಯ ಜಿ. ಜಯಲಕ್ಷ್ಮಿ (ಬಾಲ್ ಬ್ಯಾಡ್ಮಿಂಟನ್).
ಚಿಕ್ಕಮಗಳೂರು ಹೊಸಹಳ್ಳಿಯ ಎಚ್.ಎಸ್.ಅನುಶ್ರೀ(ಕುಸ್ತಿ), ಬಾಗಲಕೋಟೆ ಜಿಲ್ಲೆಯ ಬೀಮಪ್ಪ ಹಡಪದ (ಮಲ್ಲಕಂಬ), ಚಂದ್ರಶೇಖರ್ ಎಚ್.ಕಲ್ಲಹೊಲದ (ಗುಂಡುಎತ್ತುವುದು), ಹಾವೇರಿ ಜಿಲ್ಲೆಯ ಮಹೇಶ್ ಆರ್.ಎರೆಮನಿ (ಆಟ್ಯಾಪಾಟ್ಯಾ) ಆಯ್ಕೆಯಾಗಿದ್ದಾರೆ.