ಏ.28: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ

ಕುಂದಾಪುರ: ಇತಿಹಾಸ ಪ್ರಸಿದ್ದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಏ. 28 ರಂದು ನಡೆಯಲಿದೆ.

ಏ.29 ರಂದು ಚೂರ್ಣೋತ್ಸವ
ಏ.30 ರಂದು ಬೆಳಗ್ಗೆ ಅವಬೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜ ಅವರೋಹಣ ಹಾಗೂ ಕುಂಭಾಭಿಷೇಕ.

ಏ.29 ರಂದು ತುಲಾಭಾರ ಸೇವೆ ನಡೆಯಲಿರುವುದರಿಂದ ಸೇವೆ ಮಾಡಲಿಚ್ಚಿಸುವವರು ಏ.28 ರ ಸಂಜೆ ಒಳಗೆ ತಿಳಿಸಲು ದೇಗುಲದ ಪ್ರಕಟಣೆ ತಿಳಿಸಿದೆ.

ವರ್ಷದ ಎಲ್ಲಾ ದಿನಗಳಲ್ಲಿಯೂ ದೇಗುಲದಲ್ಲಿ ಅನ್ನಪ್ರಸಾದ ಹಾಗೂ ವಸತಿ ವ್ಯವಸ್ಥೆ ಇದ್ದು ಪ್ರತಿದಿನ ಸೀರೆಗಳ ಮಾರಾಟವೂ ನಡೆಯುತ್ತದೆ.