ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ಕಾಮದೇನು ಗೋಶಾಲೆಯ ಪ್ರವರ್ತಕ ರಾಜೇಂದ್ರ ಚಕ್ಕೇರ್ ಅವರಿಗೆ ಸನ್ಮಾನ

ಉಡುಪಿ: ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ಮಕ್ಕಳಿಲ್ಲದ ಕೊರಗಿನಿಂದ ದೂರವಾಗಿರಲು ಬ್ರಹ್ಮಾವರ ಬಳಿಯ ನಂಜರಿನಲ್ಲಿರುವ ತನ್ನ 8 ಎಕ್ರೆ ಕೃಷಿ ಜಮೀನಿನಲ್ಲಿ 2021 ರಿಂದ ರಸ್ತೆ ಅಪಘಾತದಲ್ಲಿ ನಡೆದಾಡಲು ಸಾಧ್ಯವಿಲ್ಲದ ಗೋವುಗಳು ಮತ್ತು ಗೋ ಕಳ್ಳರಿಂದ ರಕ್ಷಿಸಲ್ಪಟ್ಟ ಮತ್ತು ರಸ್ತೆ ಬದಿ ಬಿಟ್ಟಿರುವ ಮುದಿ ಗೋವುಗಳು ಸೇರಿ ಸುಮಾರು 270 ದನಗಳ ಪಾಲನೆ ಮಾಡುತ್ತಿರುವ “ಕಾಮದೇನು ಗೋ ಶಾಲೆ ” ನಂಜಾರು ಬ್ರಹ್ಮಾವರ ಇದರ ಪ್ರವವರ್ತಕರಾದ ಸಮಾಜ ಸೇವಕ ಮತ್ತು ಬಾಬಾ ರಾಮದೇವ್ ರವರ ಯೋಗ ಶಿಕ್ಷಣ ತರಬೇತುದಾರ ರಾಜೇಂದ್ರ ಚಕ್ಕೇರ್ ರವರನ್ನು ಹಿರಿಯಡ್ಕದ ನಾರಾಯಣ ಗುರು ಸಭಾ ಭವನದಲ್ಲಿ ಹಿರಿಯಡ್ಕ ಲಯನ್ಸ್ ಅಧ್ಯಕ್ಷ ರಘುವೀರ್ ಶೆಟ್ಟಿಗಾರ್ ರವರ ಅದ್ಯಕ್ಷತೆಯಲ್ಲಿ ಜರಗಿದ ಲಯನ್ಸ್ ಕಾರ್ಯಕ್ರಮ ದಲ್ಲಿ ಜಿಲ್ಲಾ ಲಯನ್ಸ್ ನ ಹಿರಿಯ ಸದಸ್ಯ ಡಾ. ಗಣೇಶ್ ಪೈ, ಪ್ರಾಂತಿಯ ಅಧ್ಯಕ್ಷರಾದ ಸುದರ್ಶನ್ ನಾಯಕ್ ಮತ್ತು ವಲಯ ಅಧ್ಯಕ್ಷರಾದ ಟಿ.ಕೇಶವರಾಯ ಪೈ, ಪ್ರಾಂತಿಯ ಕಾರ್ಯದರ್ಶಿ ರಾಜೇಶ್ ಮೊದಲಾದ ಲಯನ್ಸ್ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯಡ್ಕ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನುಷಾ ಆಚಾರ್ಯ, ಕೋಶಾಧಿಕಾರಿ ಶ್ರೀನಾಥ್ ಶೆಟ್ಟಿ, ಮಣಿಪಾಲ ಕ್ಲಬ್ ಅಧ್ಯಕ್ಷರಾದ ಡಾ. ನಿಶಾಂತ್, ಉಡುಪಿ ಸಮೃದ್ಧಿ ಅಧ್ಯಕ್ಷರಾದ ಉದಯಕುಮಾರ್, ಪರ್ಕಳ ಕ್ಲಬ್ ಕಾರ್ಯದರ್ಶಿ ಭಗೀರಥ ಸಾಲ್ಯಾನ್, ಸುಭಾಸ್ ನಗರ ಕ್ಲಬ್ ಉಪಾಧ್ಯಕ್ಷರಾದ ಸ್ಟೇಪಿನ್ ಕಾಸ್ಟಲಿನೊ ಮತ್ತು ವಿವಿಧ ಕ್ಲಬ್ ಗಳ ಸದಸ್ಯರು ಉಪಸ್ಥಿತರಿದ್ದರು.