ಉಡುಪಿ: ಉಡುಪಿ ಕಲ್ಯಾಣಪುರ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆಯ ನೂತನ ಆಲಯ ಸಮರ್ಪಣೆ ಪುನಃ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಮತ್ತು ವಾರ್ಷಿಕ ಸಮಾರಂಭ ಜೂ. 4ರಿಂದ ಜೂ. 7ರ ವರೆಗೆ ಜರಗಲಿದೆ.
ಜೂ. 4ರಂದು ಸಂಜೆ 3.30ಕ್ಕೆ ಕಲ್ಯಾಣಪುರ ಶ್ರೀ ವೀರಭದ್ರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ವ್ಯಾಯಮ ಶಾಲೆಗೆ ತಲುಪಲಿದೆ ದೇವಸ್ಥಾನದ ಧರ್ಮದರ್ಶಿ ಜ್ಯೋತಿಪ್ರಸಾದ ವಿ.ಶೆಟ್ಟಿಗಾರ ಚಾಲನೆ ನೀಡಲಿದ್ದಾರೆ. ಅಂದು ಸಂಜೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆ, ತೋರಣ,ಉಗ್ರಾಣ ಮುಹೂರ್ತ, ವಾಸ್ತುಹೋಮ, ವಾಸ್ತುಬಲಿ ನಡೆಯಲಿದೆ.
ಜೂ.5- ಬೆಳಗ್ಗೆ 5.55ಕ್ಕೆ ಗಣಹೋಮ, ಶ್ರೀ ಬಾಲಮಾರುತಿ ದೇವರ ಪುನಃ ಪ್ರತಿಷ್ಠೆ, ವಾಯುಸ್ತುತಿ ಹೋಮ, ಶ್ರೀ ವಿಷ್ಣುಸೂಕ್ತ ಹೋಮ, ನವಗ್ರಹಯಾಗ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 6ರಿಂದ ಮಹಾಸುದರ್ಶನ ಹೋಮ, ದಿಶಾಹೋಮ, ಮಂಟಪ ಸಂಸ್ಕಾರ, ಕಲಶಮಂಡಲ ರಚನೆ, ಶ್ರೀ ಹನುಮಾನ್ ವಿಠೊಭ ಮಾತೃಮಂಡಳಿ ಹೂಡೆ ಇವರಿಂದ ಕುಣಿತ ಭಜನೆ, ರಾತ್ರಿ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಬಳಗದವರಿಂದ ರಸ ಸಂಜೆ ನಡೆಯಲಿದೆ.
ಜೂ.6ರಂದು ಬೆಳಗ್ಗೆ 6ಕ್ಕೆ ಪ್ರದಾನ ಕಲಾ ಸಾನ್ನಿಧ್ಯ ಹೋಮ, ಶಿಖರ ಕಲಶ ಪ್ರತಿಷ್ಠಾ ಪೂರ್ವಕ ಅಷೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ಪ್ರಸನ್ನ ಪೂಜೆ 11.30ಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಹಾಪೂಜೆ ಮಧ್ಯಾಹ್ನ 12.35ಕ್ಕೆ ಅನ್ನಸಂತರ್ಪಣೆ, ಸಂಜೆ 6ಗಂಟೆಗೆ ಮಹಾರಂಗ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಲಲಿತ್ ಕುಳಾಯಿ ಮತ್ತು ಬಳಗದವರಿಂದ ಭಕ್ತಿಭಾವ ಸಂಗೀತ ನಡೆಯಲಿದೆ.
ಅಂದು ರಾತ್ರಿ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಜಿ.ಶಂಕರ್ ವ್ಯಾಯಮ ಶಾಲೆ ಉದ್ಘಾಟಿಸಲಿದ್ದಾರೆ. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಮಾಜಿ ಸಚಿವ ಪ್ರಮೋದ ಮಧ್ವರಾಜ್, ಜಿ.ಪಂ. ಸದಸ್ಯ ಜನಾರ್ದನ್ ತೋನ್ಸೆ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಧರ್ಮದರ್ಶಿ ಅರುಣಾಕ್ಷ ಕಿಣಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಧ.ಗ್ರಾ. ಯೋಜನಾಧಿಕಾರಿ ರೋಹಿತ್ ಎಚ್., ಉದ್ಯಮಿಗಳಾದ ಜೆರಿ ವಿನ್ಸೆಂಟ್ ಡಾಯಸ್, ತುಕಾರಾಮ್ ಹೆಗ್ಡೆ , ಆನಂದ ಸಿ. ಕುಂದರ್ ಮತ್ತಿತರರು ಭಾಗವಹಿಸಲಿದ್ದಾರೆ .
ರಾತ್ರಿ 8.30ರಿಂದ ಮೂಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ ಜರಗಲಿದೆ .
ಜೂ. 7ರಂದು ಸಂಜೆ 6.30ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 7.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಲ್ಯಾಣಪುರ ಮೌಂಟ್ ರೋಜರಿ ಚರ್ಚಿನ ಧರ್ಮಗುರು ಲೆಸ್ಲಿ ಡಿ’ಸೋಜ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶಪಾಲ್ ಸುವರ್ಣ, ಪತ್ರಕರ್ತ ಶ್ರೀಕಾಂತ್ ಶೆಟ್ಟಿ, ನ್ಯಾಯವಾದಿ ಸುಪ್ರಸಾದ ಶೆಟ್ಟಿ,ಉದ್ಯಮಿಗಳಾದ ಬ್ಯಾಪ್ಟಿಸ್ ಡಾಯಸ್, ದಿನೇಶ ಜತ್ತನ್, ಸ್ಟೀಫನ್ ಫೆರ್ನಾಂಡಿಸ್, ಹರೀಶ್ ನಿಡಂಬಳ್ಳಿ, ಸುಬ್ಬಣ್ಣ ಪೈ, ಸಂಜೀವ ದೇವಾಡಿಗ, ಪ್ರಕಾಶ್ ಮೇಸ್ತ , ಎಡ್ವರ್ಡ್ ಲೂವಿಸ್, ಇಂದುಮತಿ ಮಲ್ಯ, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ ಶೆಟ್ಟಿ , ಡಾ| ಟಿ.ಎಂ.ಎ. ಪೈ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಶೆಟ್ಟಿ, ಬೊಬ್ಬರ್ಯ ದೈವಸ್ಥಾನದ ಅಧ್ಯಕ್ಷ ಪ್ರಕಾಶ ಪೂಜಾರಿ ಉಪಸ್ಥಿತರಿರಲಿದ್ದಾರೆ.
ಅಂದು ರಾತ್ರಿ 9.30ಗಂಟೆಗೆ ದೇವದಾಸ್ ಕಾಪಿಕಾಡ್ ತಂಡದಿಂದ ‘ಯಾನ್ ಪಂಡೆಂದ್ ಪನೊಡ್ಚಿ’ ನಾಟಕ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ, ಪ್ರ. ಕಾರ್ಯದರ್ಶಿ ಗಣೇಶ್ ಶೇರಿಗಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.