ಕಲ್ಯಾಣಪುರ ವೀರಭದ್ರ ದೇವಸ್ಥಾನ: ಉಚಿತ ಪುಸ್ತಕ ವಿತರಣೆ

ಕಲ್ಯಾಣಪುರ: ಸಂತೆಕಟ್ಟೆಯ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಪದ್ಮಶಾಲಿ ಯುವ ವೇದಿಕೆಯ ವತಿಯಿಂದ ಒಂದನೇ ತರಗತಿಯಿಂದ  ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಬುಧವಾರ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಬೋಂದೇಲ್‌ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಉಪನ್ಯಾಸಕಿ ಜ್ಞಾನೇಶ್ವರಿ ವಿಜಯಕುಮಾರ್, ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಹಾಗೂ ಎಸ್. ಎನ್. ಎಸ್. ಟ್ರಸ್ಟ್, ಬಜ್ಪೆಇದರ ಆಡಳಿತಾಧಿಕಾರಿ ಬಿ. ವಿಜಯಕುಮಾರ್ ಮತ್ತು ಸಾಯಿರಾಮ್‌ ಟೆಕ್ಸ್‌ಟೋರಿಯಂನ ರಾಜ್‌ನಾರಾಯಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದೇವಸ್ಥಾನದ ಪ್ರಧಾನ ಮೊಕ್ತೇಸರ ಕೆ.ಜ್ಯೋತಿಪ್ರಸಾದ್ ವಿ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು, ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ಭಜನಾ ಮಂಡಳಿಯ ಉಪಾಧ್ಯಕ್ಷ ಕೇಶವ ಶೆಟ್ಟಿಗಾರ್, ಕೊರಂಗ್ರಪಾಡಿ, ಶ್ರೀ ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆಯ ಅಧ್ಯಕ್ಷೆ  ಶೋಭಾಜೆ.ಶೆಟ್ಟಿಗಾರ್‌ ಕಿನ್ನಿಮುಲ್ಕಿ, ಪದ್ಮಶಾಲಿ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಶೆಟ್ಟಿಗಾರ್, ಮೂಡ ನಿಡಂಬೂರು, ಕಾರ್ಯದರ್ಶಿ ರಾಜೇಶ್ ಕೆ.ಮನ್ನೋಳಿಗುಜ್ಜಿ ಉಪಸ್ಥಿತರಿದ್ದರು. ಯುವ ವೇದಿಕೆಯ ಅಧ್ಯಕ್ಷ ಹರೀಶ್ ಶೆಟ್ಟಿಗಾರ್, ಮೂಡ ನಿಡಂಬೂರು ಸ್ವಾಗತಿಸಿದರು, ಯುವ ವೇದಿಕೆಯ ಮಾಜಿ  ಅಧ್ಯಕ್ಷ ದುರ್ಗಾದಾಸ್ ಲಕ್ಷ್ಮೀನಗರ ನಿರೂಪಿಸಿ, ವಂದಿಸಿದರು.