ಕಲ್ಯಾಣಪುರ ವೀರಭದ್ರ ದೇವಸ್ಥಾನ: ಸಾಮೂಹಿಕ ಸತ್ಯನಾರಾಯಣ ಪೂಜೆ

ಕಲ್ಯಾಣಪುರ: ಸಂತೆಕಟ್ಟೆಯ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಪದ್ಮಶಾಲಿ ಯುವ ವೇದಿಕೆಯ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಜರಗಿತು.

 ಬ್ರಹ್ಮಶ್ರೀ ಪುತ್ತೂರು ಹಯವದನ ತಂತ್ರಿಗಳು ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ಪ್ರಧಾನ ಮೊಕ್ತೇಸರರಾದ ಜ್ಯೋತಿಪ್ರಸಾದ್ ವಿ.ಶೆಟ್ಟಿಗಾರ್, ಕಿನ್ನಿಮುಲ್ಕಿ, ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾಜೆ ಶೆಟ್ಟಿಗಾರ್, ಯುವವೇದಿಕೆಯ ಅಧ್ಯಕ್ಷ ಹರೀಶ್ ಶೆಟ್ಟಿಗಾರ್ ಮೂಡನಿಡಂಬೂರು, ಕಾರ್ಯದರ್ಶಿ ರಾಜೇಶ್ ಕೆ.ಮನ್ನೋಳಿಗುಜ್ಜಿ  ಉಪಸ್ಥಿತರಿದ್ದರು.