ಮುಂಬೈ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಕಳತ್ತೂರು ವಿಶ್ವನಾಥ ಶೆಟ್ಟಿ ಇವರು ಸುಮಾರು 180 ತಿಂಗಳು 15 ವರ್ಷದಿಂದ ತಿರುಪತಿ ದೇವಸ್ಥಾನಕ್ಕೆ ಯಾತ್ರೆ ಕೈಗೊಂಡ ಪರವಾಗಿ ತನ್ನ ಹುಟ್ಟೂರ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಸಂಕ್ರಾಂತಿ ದಿವಸ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಹಿರಿಯರಾದ ಕೇಶವ ತಂತ್ರಿ ಕಳತ್ತೂರು ಹಾಗೂ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಅರ್ಚಕರು ಪ್ರಕಾಶ್ ತಂತ್ರಿ ಕಳತ್ತೂರು ಇವರನ್ನು ದೇವಳದ ಮಂಟಪದಲ್ಲಿ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಸನ್ಮಾನಿಸಿ ಕೃಷ್ಣ ದೇವರ ಮೂರ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಉದಯ್ ಶೆಟ್ಟಿ ಮುನಿಯಲು, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಉಮೇಶ್ ಶೆಟ್ಟಿ .180 ತಿಂಗಳು ತಿರುಪತಿ ಯಾತ್ರೆ ಮಾಡಿರುವ ಕಳತ್ತೂರು ವಿಶ್ವನಾಥ ಶೆಟ್ಟಿ, ದಂಪತಿಗಳು ಮೋಹನ್ ತಂತ್ರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ನಾರಾಯಣಶೆಟ್ಟಿ ವಳದೂರು, ಸದಸ್ಯರಾದ ದಿವಾಕರ ಬಿ ಶೆಟ್ಟಿ ಮಲ್ಲರು ದಾಬ ನಿವಾಸ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಪ್ರಭಾಕರ್ ಶೆಟ್ಟಿ ಕಳತ್ತೂರು, ಪಿಡಬ್ಲ್ಯೂ ದಿ ಇಂಜಿನಿಯರ್ ಮಿಥುನ್ ಶೆಟ್ಟಿ, ದೇವಳದ ಆಡಳಿತ ಮಂಡಳಿ ಸದಸ್ಯರಾದ ರಂಗನಾಥ್ ಭಟ್, ಮಮತಾ ಕಿರಣ್ ರಾಜೇಶ್ ಕುಲಾಲ್ ಹಾಗೂ ದೇವಳದ ಪ್ರಬಂಧಕ ಕೃಷ್ಣಮೂರ್ತಿ ಭಟ್, ಉಪಸ್ಥಿತರಿದ್ದರು.












