ಕಾಡುಬೆಟ್ಟು ಹುಲಿವೇಷ ತಂಡದ ರೂವಾರಿ ಕಾಡುಬೆಟ್ಟು ಅಶೋಕ್ ರಾಜ್ ತೀವ್ರ ನಿಗಾ ಘಟಕದಲ್ಲಿ

ಉಡುಪಿ: ಇಲ್ಲಿನ ಕಾಡುಬೆಟ್ಟು ನಿವಾಸಿ ಸಂಪ್ರಾದಾಯಕ ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.

ಗಣೇಶ ಚತುರ್ಥಿಯಿಂದ ಕೇರಳ, ಹುಬ್ಬಳ್ಳಿ, ತುಮಕೂರು, ಮತ್ತು ಬೆಂಗಳೂರಿನ ಆಯ್ದ ಕಡೆಗಳಲ್ಲಿಎಡೆಬಿಡದೆ ಹುಲಿವೇಷ ಧರಿಸಿದ ಕುಣಿತದ ತಂಡದೊಂದಿಗೆ ತಿರುಗಾಟ ನಡೆಸುತ್ತಿದ್ದ ಅಶೋಕ್ ತಂಡವು ಶುಕ್ರವಾರದಂದು ತಮ್ಮ ಕೊನೆಯ ಪ್ರದರ್ಶನ ನೀಡಲಿತ್ತು. ಆದರೆ ಇಷ್ಟರಲ್ಲೇ ಊಟದ ಸಮಯದಲ್ಲಿ ಏಕಾಏಕಿ ಕುಸಿದು ಬಿದ್ದ ಅಶೋಕ್ ಅವರನ್ನು ತಕ್ಷಣ ಬೆಂಗಳೂರಿನ ಸ್ವರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ತ್ರೀವ್ರ ಉಸಿರಾಟದ ತೊಂದರೆಯಿಂದ ಹೃದಯಾಘಾತವಾದ ಕಾರಣ ಬಳಿಕ ಹತ್ತಿರದ ದಯಾನಂದ ಸಾಗರ ಆಸ್ವತ್ರೆಗೆ ವರ್ಗಾಯಿಸಲಾಗಿತ್ತು.

ಇದೀಗ ತ್ರೀವ್ರ ನಿಗಾ ಘಟಕದಲ್ಲಿ ಹೃದಯಸಂಬಂಧಿ ಹಾಗೂ ಮೆದುಳಿಗೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತಿದ್ದು, ಕುಟುಂಬವು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬವು ದಿನದೂಡುತ್ತಿದೆ ಎನ್ನಲಾಗಿದೆ.