ಉಡುಪಿ: ನಮಗೆ ಪ್ರಸಾದ್ ರಂತಹ ವಿದ್ಯಾವಂತ ನಾಯಕನ ಅಗತ್ಯವಿದೆ. ಜನರಿಗೆ ಬೇಕಾದ ಉತ್ತಮ ವಿಚಾರಗಳಿಗೆ ಮಾರ್ಗದರ್ಶನ ಮಾಡುವ ಕೌಶಲ್ಯ ಪ್ರಸಾದ್ ರಾಜ್ ಕಾಂಚನ್ ಅವರಿಗಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಭಾಕರ್ ನಾಯಕ್ ಹೇಳಿದರು.
ಅವರು ಸೋಮವಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಕಡಿಯಾಳಿ ವಾರ್ಡ್ ಸಭೆಯ ಸಂದರ್ಭ ತಮ್ಮ ಸ್ವಗೃಹದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ವಿ.ಸಭಾ ಚುನಾವಣಾ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ದಿವಾಕರ್ ಕುಂದರ್, ಹರೀಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.