ನರೇಂದ್ರ ಮೋದಿ‌ 2ನೇ ಬಾರಿಗೆ ಪ್ರಮಾಣ ವಚನ, ಕಡಿಯಾಳಿ ಶ್ರೀನಿವಾಸ ಹೋಟೆಲ್ ನಿಂದ ಸಾರ್ವಜನಿಕರಿಗೆ ಉಚಿತ ಹಾಲು‌ ಪಾಯಸ ಸೇವೆ

ಉಡುಪಿ: ಉಡುಪಿ ಕಡಿಯಾಳಿ ಶ್ರೀನಿವಾಸ ಹೋಟೆಲ್ ವತಿಯಿಂದ ಮೇ. 30ರಂದು ಶ್ರೀ  ನರೇಂದ್ರ ಮೋದಿ 2ನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಹಾಲು ಪಾಯಸ ಸೇವೆ ರೂಪವಾಗಿ ವಿತರಿಸಲಾಯಿತು.
ಬಿಜೆಪಿ ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಸಭಾ ಸದಸ್ಯ ಗಿರೀಶ ಅಂಚನ್, ಗೀತಾ ಶೇಠ್ ಅವರು ಉಚಿತ ಹಾಲು ಪಾಯಸ ವಿತರಣೆಗೆ ಚಾಲನೆ ನೀಡಿದರು.
ಶ್ರೀನಿವಾಸ ಹೋಟೆಲ್ ಮಾಲೀಕರಾದ ನರಸಿಂಹ ಕಿಣಿ, ರಾಘವೇಂದ್ರ ಕಿಣಿ, ದಾವೂದ್ ಅಬೂಬಕರ್ ಇದ್ದರು.
ರಸ್ತೆಯಲ್ಲಿ ಸಾಗುವ ರಿಕ್ಷಾ, ಬಸ್ಗಳನ್ನೂ ನಿಲ್ಲಿಸಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ, ಹಾಲು ಪಾಯಸ ವಿತರಣೆ ಮಾಡಲಾಯಿತು. ಸುಮಾರು 3 ಸಾವಿರ ಮಂದಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ನೀಡಲಾಯಿತು.