ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಜೂನ್ 1 ರಿಂದ ಜೂನ್ 10 ತನಕ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು. ಜಗನ್ಮಾತೆ ಶ್ರೀ ಮಹಿಷಮರ್ದಿನಿಗೆ ಆಮಂತ್ರಣ ಪತ್ರಿಕೆ ಸಮರ್ಪಣೆ ಗೊಳಿಸಿದ ನಂತರ ಡ್ರೋನ್ ಮೂಲಕ ವಿಶಿಷ್ಟವಾಗಿ ವೇದಿಕೆಗೆ ಆಗಮಿಸಿದ ಆಮಂತ್ರಣ ಪತ್ರಿಕೆಯನ್ನು ಉಡುಪಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಪಿ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ದೇವಳದ ಅರ್ಚಕರಾದ ರಾಧಾಕೃಷ್ಣ ಉಪಾಧ್ಯಾಯ, ಸಮಿತಿಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೆ ನಾಗರಾಜ ಶೆಟ್ಟಿ,, ನಗರಸಭಾ ಸದಸ್ಯರಾದ ಗೀತಾ ಶೇಟ್ ಉಪಸ್ಥಿತರಿದ್ದರು.
ಸಮಾನ ಮನಸ್ಕರು ಕಡಿಯಾಳಿ ಪ್ರಾಯೋಜಕತ್ವದಲ್ಲಿ, ಪಾವಂಜೆ ಮೇಳದ ವತಿಯಿಂದ ಶ್ರೀದೇವಿ ಲಲಿತೋಪಾಖ್ಯಾನ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಕಿಕ್ಕಿರಿದ ಪ್ರೇಕ್ಷಕರಿಗೆ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆದ ಅತ್ಯಂತ ಮನಮೋಹಕ ಯಕ್ಷಗಾನದ ಜೊತೆಗೆ ರಾತ್ರಿ ಸುವ್ಯವಸ್ಥಿತವಾದ ಊಟ ಮತ್ತು ಮಧ್ಯ ರಾತ್ರಿಯ ಚಹಾದ ವ್ಯವಸ್ಥೆ ಮಾಡಲಾಗಿತ್ತು.